Thursday, June 18, 2026
spot_imgspot_img
spot_imgspot_img

ಸ್ಪಂದನ ಸ್ವ ಸಹಾಯ ಗುಂಪುಗಳ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ನೂತನ ಅಧ್ಯಕ್ಷರಾಗಿ ಜಯರಾಮ್ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಮೋಹನ್ ಕಟ್ಟೆ ಆಯ್ಕೆ

ವಿಟ್ಲ: ಸ್ಪಂದನ ಸ್ವ ಸಹಾಯ ಗುಂಪುಗಳ ಒಕ್ಕೂಟ ವಿಟ್ಲ ಇದರ ನೂತನ ಪದಾಧಿಕಾರಿಗಳ ಆಯ್ಕೆ ವಿಟ್ಲ ಶ್ರೀ ಪಂಚಲಿಂಗೇಶ್ವರ ಸದನದಲ್ಲಿ ನಡೆಯಿತು. ಸ್ಪಂದನ ಗುಂಪಿನ ಅಧ್ಯಕ್ಷ ಡಾ. ಎಸ್ ಆರ್ ಹರೀಶ್ ಆಚಾರ್ಯ ನೇತೃತ್ವದಲ್ಲಿ ಜರಗಿತು.

ಒಕ್ಕೂಟದ ನೂತನ ಅಧ್ಯಕ್ಷರಾಗಿ ಜಯರಾಮ್ ಬಲ್ಲಾಳ್, ಉಪಾಧ್ಯಕ್ಷರಾಗಿ ದಿನೇಶ್ ಆಚಾರ್ಯ, ಮತ್ತು ಶೋಭಾ ಮೌನೇಶ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಮೋಹನ್ ಕಟ್ಟೆ, ಸಹ ಕಾರ್ಯದರ್ಶಿಯಾಗಿ ಶಾಲಿನಿ ಚಂದ್ರಶೇಖರ ಆಚಾರ್ಯ ಇವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಶ್ವಕರ್ಮ ಬ್ಯಾಂಕ್ ಮೆಲ್ಕಾರ್ ಶಾಖಾಧಿಕಾರಿ ಶ್ರುತಿ ಬಿ. ಹಾಗೂ ಸ್ವ ಸಹಾಯ ಗುಂಪಿನ ಮೇಲ್ವಿಚಾರಕಿ ಗಾಯತ್ರಿ ಮತ್ತು ಗುಂಪಿನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!