Thursday, May 2, 2024
spot_imgspot_img
spot_imgspot_img

ಸ್ಯಾನ್‌ಡಿಸ್ಕ್​ ವೈರ್‌ಲೆಸ್ ಚಾರ್ಜರ್ ಬಿಡುಗಡೆ; ಇದರ ವಿಶೇಷತೆಗಳೇನು ಗೊತ್ತಾ?

- Advertisement -G L Acharya panikkar
- Advertisement -

ವೆಸ್ಟರ್ನ್ ಡಿಜಿಟಲ್ ಕಂಪೆನಿ ಸ್ಮಾರ್ಟ್​ಫೋನ್ ಚಾರ್ಜಿಂಗ್ ವಿಭಾಗಕ್ಕೂ ಕಾಲಿಟ್ಟಿದೆ. ಕಂಪನಿಯು ಸ್ಯಾನ್‌ಡಿಸ್ಕ್ ಇಕ್ಸ್ಪ್ಯಾಂಡ್ ವೈರ್‌ಲೆಸ್ ಚಾರ್ಜರ್ ಸಿಂಕ್ ವೈರ್​ಲೆಸ್ ಚಾರ್ಜರ್ ಅನ್ನು ಪರಿಚಯಿಸಿದೆ. ಈ ಹೊಸ ಉತ್ಪನ್ನವು ಕೇವಲ ವೈರ್‌ಲೆಸ್ ಚಾರ್ಜರ್ ಮಾತ್ರವಲ್ಲ, ಅದು ನಿಮ್ಮ ಫೋನ್‌ನ ಡೇಟಾವನ್ನು ಸ್ವಯಂಚಾಲಿತವಾಗಿ ಸಂಗ್ರಹಿಸುತ್ತದೆ. ಇದರ ಸಹಾಯದಿಂದ, ಬಳಕೆದಾರರು ತಮ್ಮ ಡೇಟಾವನ್ನು Qi ಹೊಂದಾಣಿಕೆಯ ಸಾಧನಗಳಲ್ಲಿ ಬ್ಯಾಕಪ್ ಮಾಡಬಹುದು.

ಕಂಪನಿಯು ಕೈಗೆಟುಕುವ ಸ್ಯಾನ್‌ಡಿಸ್ಕ್ ಇಕ್ಸ್ಪ್ಯಾಂಡ್ ವೈರ್‌ಲೆಸ್ ಚಾರ್ಜರ್ 15W ಅನ್ನು ಅಡಾಪ್ಟರ್‌ನೊಂದಿಗೆ ಬಿಡುಗಡೆ ಮಾಡಿದೆ. ಇಲ್ಲಿ ವೈರ್‌ಲೆಸ್ ಚಾರ್ಜರ್ 15W ವೇಗದ ಚಾರ್ಜಿಂಗ್ ನೀಡುತ್ತದೆ. ಇದು ಸ್ಯಾನ್‌ಡಿಸ್ಕ್ ಎಸಿ ಅಡಾಪ್ಟರ್ ಮತ್ತು ಯುಎಸ್‌ಬಿ ಟೈಪ್ ಸಿ ಕೇಬಲ್‌ನೊಂದಿಗೆ ಗ್ರಾಹಕರಿಗೆ ಲಭ್ಯವಿರಲಿದೆ. ಚಾರ್ಜರ್ ಸಹ ಮೃದುವಾದ ರಬ್ಬರ್ ರಿಂಗ್ ಅನ್ನು ಹೊಂದಿದ್ದು, ಅದು ಚಾರ್ಜ್ ಮಾಡುವಾಗ ಫೋನ್ ಜಾರಿಬೀಳುವುದನ್ನು ತಡೆಯುತ್ತದೆ.

ವೆಸ್ಟರ್ನ್ ಡಿಜಿಟಲ್ ಹೇಳುವಂತೆ ಸ್ಯಾನ್ಡಿಸ್ಕ್ ಇಕ್ಸ್ಪ್ಯಾಂಡ್ ವೈರ್ಲೆಸ್ ಚಾರ್ಜರ್ ಸಿಂಕ್ ಫಾಸ್ಟ್ ಚಾರ್ಜರ್ ಸಮಯದಲ್ಲಿ 10W ಪವರ್ ನೀಡುತ್ತದೆ. ಇನ್ನು ಈ ಚಾರ್ಜ್ ಸಿಂಕ್ ಸ್ವಯಂಚಾಲಿತವಾಗಿ ಪೂರ್ಣ ರೆಸಲ್ಯೂಶನ್ ನಲ್ಲಿ ಫೋಟೋಗಳು ಮತ್ತು ವೀಡಿಯೋಗಳನ್ನು ಬ್ಯಾಕಪ್ ಮಾಡುತ್ತದೆ. ಬಳಕೆದಾರರು ತಮ್ಮ ಫೋನ್ ಅನ್ನು ವೈರ್‌ಲೆಸ್ ಚಾರ್ಜರ್‌ನಲ್ಲಿಇಡಬೇಕು. ಅದು ನೇರವಾಗಿ ಡೇಟಾವನ್ನು ಬ್ಯಾಕಪ್ ಮಾಡಲು ಪ್ರಾರಂಭಿಸುತ್ತದೆ. ಈ ಚಾರ್ಜರ್ 256 GB ಸ್ಟೊರೇಜ್ ಹೊಂದಿರುವುದರಿಂದ ಹೆಚ್ಚಿನ ಡೇಟಾವನ್ನು ಸಂಗ್ರಹಿಸಿಟ್ಟುಕೊಳ್ಳಬಹುದು.

ಇಕ್ಸ್ಪ್ಯಾಂಡ್ ವೈರ್‌ಲೆಸ್ ಚಾರ್ಜ್ ಸಿಂಕ್ ಮತ್ತು ಇಕ್ಸ್ಪ್ಯಾಂಡ್ ವೈರ್‌ಲೆಸ್ ಚಾರ್ಜರ್ 15W ಎರಡೂ ಐಫೋನ್ 8 ಮತ್ತು ಮೇಲಿನ ಮಾಡೆಲ್​ಗಳಿಗೆ ಹೊಂದಿಕೊಳ್ಳುತ್ತವೆ. ಇಕ್ಸ್ಪ್ಯಾಂಡ್ ಚಾರ್ಜರ್ ಸಿಂಕ್ 9,999 ರೂ. ಲಭ್ಯವಿದೆ. Ixpand Wireless 15W ಫಾಸ್ಟ್ ಚಾರ್ಜರ್ QC 3.0 ಅಡಾಪ್ಟರ್ ಬೆಲೆ 2999 ರೂ. ಆದರೆ Ixpand ವೈರ್ ಲೆಸ್​ ಚಾರ್ಜರ್ 15W ಬೆಲೆ 1,999 ರೂ.ಸ್ಯಾನ್‌ಡಿಸ್ಕ್ ಇಕ್ಸ್‌ಪ್ಯಾಂಡ್ ವೈರ್‌ಲೆಸ್ ಚಾರ್ಜರ್‌ಗಳಿಗೆ ಎರಡು ವರ್ಷಗಳ ಸೀಮಿತ ವಾರೆಂಟಿ ನೀಡಲಾಗುತ್ತದೆ. ನೀವು ಈ ಹೊಸ ಮಾದರಿಯ ಚಾರ್ಜರ್ ಅನ್ನು ಅಮೆಜಾನ್‌.ಇನ್, ಕ್ರೋಮಾ, ಪೂರ್ವಿಕಾ ಮತ್ತು ಇತರ ಆನ್​ಲೈನ್ ಶಾಂಪಿಂಗ್ ಸೈಟ್​ಗಳಲ್ಲಿ ಖರೀದಿಸಬಹುದು.

driving
- Advertisement -

Related news

error: Content is protected !!