Sunday, May 5, 2024
spot_imgspot_img
spot_imgspot_img

ಸ್ವಾತಂತ್ರ್ಯದ 100 ವರ್ಷಗಳ ಸಂಭ್ರಮವನ್ನು ಭಾರತ ಹೇಗೆ ಎದುರುಗೊಳ್ಳಲಿದೆ..? ; ಸರ್ಕಾರದ ‘ವಿಷನ್ ಇಂಡಿಯಾ @2047’ ನೀಡಲಿದೆ ಉತ್ತರ

- Advertisement -G L Acharya panikkar
- Advertisement -
vtv vitla
vtv vitla

2047 ರ ವೇಳೆಗೆ ಭಾರತವು ಸ್ವಾತಂತ್ರ್ಯದ 100 ವರ್ಷಗಳ ಸಂಭ್ರಮವನ್ನು ಆಚರಿಸಲಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಏನನ್ನು ಸಾಧಿಸಬಹುದು ಎಂಬ ಪ್ರಶ್ನೆಯನ್ನು ಮನದಲ್ಲಿಟ್ಟುಕೊಂಡು ನರೇಂದ್ರ ಮೋದಿ ಸರ್ಕಾರವು ‘ವಿಷನ್ ಇಂಡಿಯಾ @2047’ ನೊಂದಿಗೆ ಮುನ್ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಸರ್ಕಾರವು ಯೋಜನೆಯನ್ನು ಸಿದ್ಧಪಡಿಸುತ್ತಿದೆ ಎಂದು ಸರ್ಕಾರದ ಉನ್ನತ ಸ್ಥಾನಗಳಲ್ಲಿರುವ ಮೂಲಗಳನ್ನು ಆಧರಿಸಿ ವರದಿ ಮಾಡಿದೆ. ಕಾರ್ಯದರ್ಶಿಗಳ ತಂಡವು ಭಾರತ ವಿಶ್ವ ನಾಯಕನ ಸ್ಥಾನಕ್ಕೇರಲು ಸಂಬಂಧಿಸಿದ ಮಾರ್ಗಸೂಚಿ ಹಾಗೂ ಅದಕ್ಕೆ ಪೂರಕವಾದ ಆಯಕಟ್ಟಿನ ಕ್ಷೇತ್ರಗಳನ್ನು ಗುರುತಿಸುವ ಕುರಿತು ಚರ್ಚೆ ನಡೆಸುತ್ತಿದೆ. ಹಾಗೆಯೇ ಅಸ್ತಿತ್ವದಲ್ಲಿರುವ ಪ್ರಕ್ರಿಯೆಗಳು ಮತ್ತು ನಿಬಂಧನೆಗಳನ್ನು ಜಾಗತಿಕ ಮಾನದಂಡಗಳಿಗೆ ಸಮನ್ವಯ ಮಾಡುವುದರ ಕುರಿತು ಅವರು ಚಿಂತಿಸುತ್ತಿದ್ದು, ಭಾರತದ ಶೈಕ್ಷಣಿಕ, ಸಂಶೋಧನಾ ಸಂಸ್ಥೆಗಳು ಮತ್ತು ಥಿಂಕ್-ಟ್ಯಾಂಕ್‌ಗಳನ್ನು ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಮಟ್ಟದಲ್ಲಿ ಸಿದ್ಧಗೊಳಿಸಲು ನೀಲನಕ್ಷೆನನ್ನು ಸಿದ್ಧಪಡಿಸಲಾಗುತ್ತದೆ.

2047 ರ ವೇಳೆಗೆ ಭಾರತವು ಏನನ್ನು ಸಾಧಿಸಲು ಬಯಸುತ್ತದೆ ಎಂಬುದರ ಯೋಜನೆಗಳು ಇನ್ನೂ ವಿಕಸನಗೊಳ್ಳುತ್ತಿವೆ ಎಂದು ಮೂಲಗಳು ತಿಳಿಸಿವೆ. ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಮುಂಬರುವ ವಾರಗಳಲ್ಲಿ ಕಾರ್ಯದರ್ಶಿಗಳ ಗುಂಪುಗಳೊಂದಿಗೆ ‘ವಿಷನ್ ಇಂಡಿಯಾ@ 2047’ ಯೋಜನೆಗಳನ್ನು ಚರ್ಚಿಸುವ ಸಾಧ್ಯತೆಯಿದೆ.

ಕರಡು ರಚನೆಗೆ ಯೋಜಿಸಲಾದ ವಿಷನ್ ಡಾಕ್ಯುಮೆಂಟ್ ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಸಾಧಿಸಲು ಬಯಸುತ್ತಿರುವ ಪ್ರಮುಖ ಗೋಲ್‌ಪೋಸ್ಟ್‌ಗಳನ್ನು ರೂಪಿಸುತ್ತದೆ ಹಾಗೆಯೇ ಇದಕ್ಕೆ ಅಗತ್ಯವಾದ ಮಾರ್ಗಸೂಚಿ ಹಾಗೂ ಗಡುವನ್ನು ನಿರ್ಧರಿಸಲಾಗುತ್ತದೆ. ಇದು ಮೂಲಸೌಕರ್ಯ ಮತ್ತು ಭಾರತೀಯ ನಾಗರಿಕರ ಜೀವನದ ಗುಣಮಟ್ಟದ ವಿಷಯದಲ್ಲಿ ಭಾರತದ ದೀರ್ಘಾವಧಿಯ ಆಕಾಂಕ್ಷೆಗಳನ್ನು ಎತ್ತಿ ತೋರಿಸಲಿದೆ. ‘ವಿಷನ್ ಇಂಡಿಯಾ @ 2047’ ಯೋಜನೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಂಸ್ಥಿಕ ಪರಿಣತಿಯನ್ನು ಅಭಿವೃದ್ಧಿಪಡಿಸುವ ಮಾರ್ಗಗಳನ್ನು ಸೂಚಿಸುವ ಅಗತ್ಯವಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತದ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಜಾಗತಿಕ ನಾಯಕರಾಗುವುದನ್ನು ಖಚಿತಪಡಿಸಿಕೊಳ್ಳಲು ಮಾರ್ಗಸೂಚಿಯನ್ನು ಸಿದ್ಧಪಡಿಸುವುದು ಮತ್ತು ವಿದೇಶಿ ಸರ್ಕಾರಗಳು ಮತ್ತು ಅಂತರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಹಕರಿಸಲು ಕಾರ್ಯವಿಧಾನವನ್ನು ರೂಪಿಸುವುದು ಸೇರಿದಂತೆ ಇತರ ಯೋಜನೆಗಳನ್ನು ಚರ್ಚಿಸಲಾಗುತ್ತದೆ. ಇದರಿಂದಾಗಿ ಭಾರತದ ಬೆಳವಣಿಗೆಯ ಹಾದಿಯಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.

vtv vitla
H

ಯೋಜನೆಗಳು ರಾಜ್ಯಗಳಾದ್ಯಂತ ಅಸಮಾನತೆಗಳನ್ನು ನಿವಾರಿಸುವ ಮಾರ್ಗಗಳನ್ನು ರೂಪಿಸಬಹುದು ಎಂದು ಹೇಳಲಾಗಿದೆ. ಅಲ್ಲದೇ, ವಿಷನ್ 2047ಕ್ಕಾಗಿ ಈ ದಶಕದೊಳಗೆ ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಸಮಿತಿಯು ಸೂಚಿಸಲಿದೆ. ಪ್ರಸ್ತುತ ‘ಆಜಾದಿ ಕಾ ಅಮೃತ್ ಮಹೋತ್ಸವ’ ಎಂಬ ವರ್ಷದ ಅಭಿಯಾನದ ಅಡಿಯಲ್ಲಿ ಕೇಂದ್ರವು ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಆಚರಿಸುತ್ತಿದೆ.

vtv vitla
vtv vitla
vtv vitla
- Advertisement -

Related news

error: Content is protected !!