Saturday, April 20, 2024
spot_imgspot_img
spot_imgspot_img

ಸ್ವಾತಂತ್ರ್ಯೋತ್ಸವ ಸಂಭ್ರಮ: ಮೈಸೂರಿನಲ್ಲಿ 20 ಮಂದಿ ಕೈದಿಗಳಿಗೆ ಬಿಡುಗಡೆ ಭಾಗ್ಯ

- Advertisement -G L Acharya panikkar
- Advertisement -

ಮೈಸೂರು: ನಗರದ ಕೇಂದ್ರ ಕಾರಾಗೃಹದಲ್ಲಿದ್ದ 20 ಪುರುಷ ‘ಅಲ್ಪಾವಧಿ ಶಿಕ್ಷಾ ಬಂದಿ’ಗಳನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ವಿಶೇಷ ಮಾಫಿಯೊಂದಿಗೆ ಅವಧಿಪೂರ್ವವಾಗಿ ಸೋಮವಾರ ಬಿಡುಗಡೆಗೊಳಿಸಲಾಯಿತು.

ವಿವಿಧ ಪ್ರಕರಣಗಳಲ್ಲಿ ಕಾರಾಗೃಹದಲ್ಲಿದ್ದ ಅವರು, ಶೇ 60ರಷ್ಟು ಶಿಕ್ಷೆ ಪೂರೈಸಿದವರಾಗಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಬಿಡುಗಡೆ ಪತ್ರ ವಿತರಿಸಿದರು. ಬಳಿಕ ಮಾತನಾಡಿದ ಅವರು, ‘ಮಾರ್ಗಸೂಚಿ ಪ್ರಕಾರ ಏಳು ವರ್ಷಗಳೊಳಗಿನ ಶಿಕ್ಷೆಗೆ ಗುರಿಯಾಗಿದ್ದವರನ್ನು ವಿಶೇಷ ಮಾಫಿಯೊಂದಿಗೆ ಬಿಡುಗಡೆ ಮಾಡಲಾಗಿದೆ. ಸಣ್ಣ-ಪುಟ್ಟ ಪ್ರಕರಣಗಳಲ್ಲಿ ತಪ್ಪೆಸಗಿದ್ದವರಿವರು. ಇಲ್ಲಿಂದ ಹೋದವರು, ಮತ್ತೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸದೇ ಉತ್ತಮ ಬದುಕು ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಕೇಂದ್ರ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್‌ ಕೆ.ಸಿ. ದಿವ್ಯಶ್ರೀ ಮಾತನಾಡಿ, ‘ಕೇಂದ್ರದ ಮಾರ್ಗಸೂಚಿ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಅಂಗವಾಗಿ 20 ಮಂದಿ ಅಲ್ಪಾವಧಿ ಶಿಕ್ಷಾ ಬಂದಿಗಳನ್ನು ಬಿಡುಗಡೆ ಮಾಡಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ವಿಶೇಷ ಮಾಫಿ ಇದಾಗಿದೆ. ಇನ್ನೆರಡು ಹಂತಗಳಲ್ಲಿ ಬಿಡುಗಡೆಯು ಗಣರಾಜ್ಯೋತ್ಸವ ಹಾಗೂ ಮುಂದಿನ ಸ್ವಾತಂತ್ರ್ಯ ದಿನದಂದು ನಡೆಯಲಿದೆ’ ಎಂದರು.

“ಜೈಲುಗಳು ಹೆಚ್ಚಿನ ಸಂಖ್ಯೆಯಿಂದ ತುಂಬಿದ್ದು, ಏಕರೂಪ ನೀತಿ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್‌ ಕೂಡ ಈಚೆಗೆ ನಿರ್ದೇಶನ ನೀಡಿದೆ. ಅಲ್ಪಾವಧಿ ಶಿಕ್ಷಾ ಬಂದಿಗಳಿಗೆ ಒಳ್ಳೆಯ ನಾಗರಿಕರಾಗಲು ಅವಕಾಶ ಕಲ್ಪಿಸಲಾಗಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹೊರಗಡೆ ಹೋದವರು, ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು” ಎಂದು ತಿಳಿಸಿದರು.

ಕಾರಾಗೃಹದ ಸಹಾಯಕ ಸೂಪರಿಂಟೆಂಡೆಂಟ್ ವಿಜಯ್‌ ರೋಡ್ಕರ್‌, ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷ್, ಜನರಲ್‌ ಸರ್ಜನ್‌ ಡಾ.ಕಿರಣ್, ಎಸ್‌ಐ ಅಮರ್‌ ಹುಲ್ಲೋಳಿ, ಜೈಲರ್‌ಗಳಾದ ಗೀತಾ ಮಾಲಗಾರ, ರಘುಪತಿ ಇದ್ದರು.

- Advertisement -

Related news

error: Content is protected !!