Wednesday, May 1, 2024
spot_imgspot_img
spot_imgspot_img

ಸ್ವಿಚ್ ಬೋರ್ಡ್ ಗೆ ಕೈ ಹಾಕಿ 11 ತಿಂಗಳ ಮಗು ಮೃತ್ಯು

- Advertisement -G L Acharya panikkar
- Advertisement -

ಚಾಮರಾಜನಗರ: ಮಗುವೊಂದು ವಿದ್ಯುತ್ ಸ್ವಿಚ್ ಬೋರ್ಡ್ ಗೆ ಕೈ ಹಾಕಿದ ಪರಿಣಾಮ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಯಳಂದೂರು ತಾಲೂಕಿನ ವೈ.ಕೆ.ಮೂಳ ಗ್ರಾಮದಲ್ಲಿ ಭಾನುವಾರ ಬೆಳಗ್ಗಿನ ಜಾವದಲ್ಲಿ ನಡೆದಿದೆ.

ಗ್ರಾಮದ ರಂಗಸ್ವಾಮಿ ಮತ್ತು ಲಕ್ಷ್ಮಿ ದಂಪತಿಯ 11 ತಿಂಗಳ ಪುತ್ರ ಗಗನ್, ಭಾನುವಾರ ಎಂದಿನಂತೆ ತಮ್ಮನ ಮನೆಯವರ ಮಕ್ಕಳ ಜೊತೆ ಆಟವಾಡಿದ್ದಾನೆ. ನಂತರ ಸ್ನಾನ ಮಾಡಿಸಿ ಮನೆಯಲ್ಲಿ ಪೋಷಕರು ಮಲಗಿಸಿದ್ದಾರೆ. ಎಚ್ಚರಗೊಂಡಾಗ ಮಗು ವಿದ್ಯುತ್ ಸ್ವಿಚ್ ಬೋರ್ಡ್ ಗೆ ಕೈ ಹಾಕಿದ ಮಗು ಕಿರುಚುವುದನ್ನು ಗಮನಿಸಿದ ಮಗುವಿನ ಚಿಕ್ಕಮ್ಮ ಮಗುವನ್ನು ಬಿಡಿಸಲು ತೆರಳಿದಾಗ ಅವರಿಗೂ ವಿದ್ಯುತ್ ಶಾಕ್ ಹೊಡದಿದೆ.

ಇಬ್ಬರನ್ನು ತಕ್ಷಣ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಗು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

vtv vitla
- Advertisement -

Related news

error: Content is protected !!