Thursday, March 28, 2024
spot_imgspot_img
spot_imgspot_img

ಹಿಂದುಯೇತರ ಎನ್ನುವ ಕಾರಣಕ್ಕೆ ಖ್ಯಾತ ಭರತನಾಟ್ಯ ಕಲಾವಿದೆಯ ಪ್ರದರ್ಶನ ರದ್ದುಗೊಳಿಸಿದ ದೇವಸ್ಥಾನ ಮಂಡಳಿ

- Advertisement -G L Acharya panikkar
- Advertisement -

ಕೇರಳದ ತ್ರಿಶೂರು ಜಿಲ್ಲೆಯ ಕೂಡಲ್ಮಾಣಿಕ್ಯಂ ದೇವಸ್ಥಾನದಲ್ಲಿ ಮುಂಬರುವ ಉತ್ಸವದ ಸಂದರ್ಭದಲ್ಲಿ ಖ್ಯಾತ ಭರತನಾಟ್ಯ ಕಲಾವಿದೆ ಮಾನ್ಸಿಯಾ ವಿ.ಪಿ ಅವರು ನೀಡಲಿದ್ದ ನೃತ್ಯ ಪ್ರದರ್ಶನವನ್ನು ಆಕೆ ಹಿಂದುಯೇತರ ಕಲಾವಿದೆ ಎಂಬ ಕಾರಣಕ್ಕೆ ಆಡಳಿತ ಮಂಡಳಿಯು ರದ್ದುಗೊಳಿಸಿದೆ ಎಂದು ತಿಳಿದು ಬಂದಿದೆ.

ಮುಸ್ಲಿಮ್ ಸಮುದಾಯದಲ್ಲಿ ಜನಿಸಿರುವ ಮಾನ್ಸಿಯಾ ತನ್ನನ್ನು ನಾಸ್ತಿಕ ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ದೇವಸ್ಥಾನದಲ್ಲಿ 10 ದಿನಗಳ ಕಾಲ ನಡೆಯಲಿರುವ ಉತ್ಸವದಲ್ಲಿ ಸುಮಾರು 800 ಕಲಾವಿದರು ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

‘ಕಲಾವಿದರನ್ನು ಅವರು ಹಿಂದುಗಳೇ ಅಥವಾ ಹಿಂದುಯೇತರರೇ ಎಂದು ನಾವು ಕೇಳಬೇಕಾಗುತ್ತದೆ. ತನಗೆ ಯಾವುದೇ ಧರ್ಮವಿಲ್ಲವೆಂದು ಮಾನ್ಸಿಯಾ ಲಿಖಿತ ಹೇಳಿಕೆ ನೀಡಿದ್ದಾರೆ. ಹೀಗಾಗಿ ದೇವಸ್ಥಾನದ ಸಂಪ್ರದಾಯದಂತೆ ನಾವು ನಡೆದುಕೊಂಡಿದ್ದೇವೆ ‘ ಎಂದು ಕೂಡಲ್ಮಾಣಿಕ್ಯಂ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರದೀಪ ಮೆನನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಮುಂಚಿತವಾಗಿ ಕಾರ್ಯಕ್ರಮವು ನಿಗದಿಯಾಗಿದ್ದರೂ ಸರಕಾರದ ದೇವಸ್ವಂ ಮಂಡಳಿಯ ಅಧೀನದಲ್ಲಿರುವ ದೇವಸ್ಥಾನವು ತಾನು ಕಾರ್ಯಕ್ರಮ ನೀಡುವುದನ್ನು ನಿಷೇಧಿಸಿದೆ. ಕಾರ್ಯಕ್ರಮದ ವಿವರಗಳೊಂದಿಗೆ ಕರಪತ್ರಗಳನ್ನೂ ಮುದ್ರಿಸಲಾಗಿದೆ ಎಂದು ಮಾನ್ಸಿಯಾ ತನ್ನ ಮಾ.27ರ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

ತಾನು ಹಿಂದುಯೇತರ ಆಗಿರುವುದರಿಂದ ದೇವಸ್ಥಾನದಲ್ಲಿ ಪ್ರದರ್ಶನವನ್ನು ನೀಡುವಂತಿಲ್ಲ ಎಂದು ದೇವಳದ ಪದಾಧಿಕಾರಿಯೋರ್ವರು ತನಗೆ ತಿಳಿಸಿದ್ದಾರೆ ಎಂದಿರುವ ಮಾನ್ಸಿಯಾ, ಕಲಾವಿದರಿಗೆ ಅವರ ಧರ್ಮವನ್ನು ಆಧರಿಸಿ ವೇದಿಕೆಯಲ್ಲಿ ಅವಕಾಶ ನೀಡಲಾಗುತ್ತಿದೆಯೇ ಹೊರತು ಅವರ ಪ್ರತಿಭೆಯನ್ನಲ್ಲ ಎಂದಿದ್ದಾರೆ.

ಕೇರಳ ಕಲಾಮಂಡಳಂನಲ್ಲಿ ಭರತನಾಟ್ಯದಲ್ಲಿ ಪಿಎಚ್ಡಿ ಅಧ್ಯಯನವ ವನ್ನು ಮಾಡುತ್ತಿರುವ ಮಾನ್ಸಿಯಾ,ವಯಲಿನ್ ವಾದಕ ಹಾಗೂ ಕಲಾವಿದ ಶ್ಯಾಮ ಕಲ್ಯಾಣ್ ಅವರನ್ನು ಮದುವೆಯಾದ ಬಳಿಕ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದೀರಾ ಎಂದು ದೇವಳದ ಪದಾಧಿಕಾರಿ ತನ್ನನ್ನು ಪ್ರಶ್ನಿಸಿದ್ದರು. ತನಗೆ ಧರ್ಮವಿಲ್ಲ,ತಾನು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ತನಗೆ ಇಂತಹ ಅನುಭವ ಇದೇ ಮೊದಲೇನಲ್ಲ,ಹೀಗಾಗಿ ತಾನು ವಿಚಲಿತಳಾಗಿಲ್ಲ ಎಂದು ಹೇಳಿದ ಮಾನ್ಸಿಯಾ,ರಾಜ್ಯದಲ್ಲಿಯ ಗುರುವಾಯೂರು ದೇವಸ್ಥಾನವು ಒಮ್ಮೆ ತನ್ನ ಪ್ರದರ್ಶನಕ್ಕೆ ಅವಕಾಶವನ್ನು ನಿರಾಕರಿಸಿತ್ತು ಎಂದು ಅರೋಪಿಸಿದರು.

- Advertisement -

Related news

error: Content is protected !!