Friday, March 29, 2024
spot_imgspot_img
spot_imgspot_img

ಹಿಂದೂ ಮುಖಂಡ ಅಕ್ಷಯ್ ರಜಪೂತ್‌ ಅವರಿಂದ ಮಲಬಾರ್ ಗೋಲ್ಡ್‌ ವಿರುದ್ಧ ಆಕ್ರೋಶ; ಕ್ಷಮೆಯಾಚಿಸಿದ ಮಲಬಾರ್ ಗೋಲ್ಡ್‌

- Advertisement -G L Acharya panikkar
- Advertisement -
astr

ಉಡುಪಿ: ಓಣಂ ಹಬ್ಬದಂದು ಉಡುಪಿಯ ಮಲಬಾರ್‍ ಗೋಲ್ಡ್‌ ಕಂಪೆನಿ ಕೇರಳದ ಪ್ರಸಿದ್ದ ಹಿಂದೂ ಸಾಂಸ್ಕೃತಿಕ ಕಲೆ ತಿರುವಾದಿರಕಲಿಗೆ ಅವಮಾನ ಮಾಡಿದ್ದಾರೆ ಎಂದು ಹಿಂದೂ ಮುಖಂಡ ಅಕ್ಷಯ್ ರಜಪೂತ್‌ ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದರು.

ಫೇಸ್‌ಬುಕ್‌ನಲ್ಲಿ “ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ, ಬಿಂದಿ ಇಲ್ಲದೆ ಕರೀನಾ ಕಪೂರ್ ಖಾನ್ ಳ ವಿವಾದತ್ಮಕ ಜಾಹೀರಾತುಗಳಿಂದ ಹಿಂದೂ ವಿರೋಧಿ ಧೋರಣೆ ಹೊಂದಿರುವ ಚಿನ್ನಾಭರಣ ಮಳಿಗೆ ಮಲಬಾರ್ ಗೋಲ್ಡ್ ನಿಂದ ಮತ್ತೊಂದು ಹಿಂದೂ ವಿರೋಧಿ ಕೃತ್ಯ, ಕೇರಳದ ಪ್ರಸಿದ್ದ ಹಿಂದೂ ಸಾಂಸ್ಕೃತಿಕ ಕಲೆ ತಿರುವಾದಿರಕಲಿಗೆ ಅವಮಾನ. ಯುವಕರಿಗೆ ಮಹಿಳೆಯರ ವೇಷ ಹಾಕಿಸಿ ಹಾಸ್ಯಸ್ಪದ ರೀತಿಯಲ್ಲಿ ನೃತ್ಯ ಮಾಡಿಸಿ ಓಣಂ ಆಚರಣೆ ಮಾಡಿದ ಉಡುಪಿಯ ಮಲಬಾರ್ ಗೋಲ್ಡ್ ಮಳಿಗೆ” ಎಂದು ಬರೆದುಕೊಂಡಿದ್ದರು.

ಈಗ ಮಲಬಾರ್‍ ಗೋಲ್ಡ್‌ನ ಉಡುಪಿ ಶಾಖೆಯ ಮ್ಯಾನೇಜರ್‍ ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ.

- Advertisement -

Related news

error: Content is protected !!