Sunday, August 30, 2026
spot_imgspot_img
spot_imgspot_img

ಹಿಂದೂ-ಮುಸ್ಲಿಂ ಜೊತೆಗೂಡಿ ರಾಮನವಮಿ ಆಚರಣೆ

- Advertisement -
- Advertisement -
vtv vitla
vtv vitla

ತುಮಕೂರು: ರಾಜ್ಯದಲ್ಲಿ ಹಿಜಾಬ್, ಹಲಾಲ್ ಕಟ್, ಮುಸ್ಲಿಂ ವ್ಯಾಪಾರ ಬ್ಯಾನ್ ನಡುವೆಯೂ, ರಾಮನವಮಿಯನ್ನು ಸಂಭ್ರಮದಿಂದ ಹಿಂದೂ-ಮುಸ್ಲಿಂ ಮುಖಂಡರು ಆಚರಿಸಿರೋ ಘಟನೆ, ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ ಭದ್ರಮ್ಮ ಸರ್ಕಲ್ ನಲ್ಲಿ ಇಂದು ರಾಮನವಮಿಯ ಸಂದರ್ಭದಲ್ಲಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಕೇಸರಿ ಶಾಲು ತೊಟ್ಟು, ಜೈ ಶ್ರೀರಾಮ್ ಘೋಷಣೆ ಕೂಗಿ, ಸಾರ್ವಜನಿಕರಿಗೆ ಪಾನಕ-ಪಲಾರ, ಮಜ್ಜಿಗೆ ಹಂಚಿ ಗಮನ ಸೆಳೆದರು. ಕಾಂಗ್ರೆಸ್ ಯುವ ಕಾರ್ಯಕರ್ತರು ಕೇಸರಿ ಶಾಲು ಧರಿಸಿದ್ರೇ, ಮುಸ್ಲಿಂಮರು ಟೋಪಿ ಧರಿಸಿ, ಶ್ರೀರಾಮ ನವಮಿ ಪೂಜೆಯಲ್ಲಿ ಭಾಗಿಯಾಗಿದ್ದು ಕಂಡು ಬಂತು. ಜೊತೆಗೆ ಪಾನಕ ಹಂಚಿ, ರಾಮನವಮಿ ಆಚರಿಸಿದರು.

vtv vitla
- Advertisement -

Related news

error: Content is protected !!