Sunday, May 5, 2024
spot_imgspot_img
spot_imgspot_img

ಹಿಂದೂ ಯುವ ಸೇನೆ ಶ್ರೀ ಮಹಾದೇವಿ ಶಾಖೆ, ಹಿಂದೂ ನಗರ, ಬಗಂಬಿಲ ಇವರ ವತಿಯಿಂದ ರಕ್ತದಾನ ಶಿಬಿರ

- Advertisement -G L Acharya panikkar
- Advertisement -

vtv vitla
vtv vitla

ಉಳ್ಳಾಲ : ಹಿಂದೂ ಯುವ ಸೇನೆ ಶ್ರೀ ಮಹಾದೇವಿ ಶಾಖೆ, ಹಿಂದೂ ನಗರ, ಬಗಂಬಿಲ ಇವರ ವತಿಯಿಂದ ದೇರಳೆಕಟ್ಟೆ ನಿಟ್ಟೆ ಕೆ.ಎಸ್.ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರ ಬಗಂಬಿಲ ಫ್ರೆಂಡ್ಸ್ ಸರ್ಕಲ್ ಆವರಣದಲ್ಲಿ ಆದಿತ್ಯವಾರ ನಡೆಯಿತು.


ಕಾರ್ಯಕ್ರಮವನ್ನು ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿಯ ಗೌರವಾಧ್ಯಕ್ಷ ಭಾಸ್ಕರ ಚಂದ್ರ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ 1992 ಜನವರಿ11 ರಂದು ಪ್ರಪ್ರಥಮ ರಕ್ತದಾನ ಶಿಬಿರವನ್ನು ಮಾಡಿದ್ದು, ಆಸಂದರ್ಭದಲ್ಲಿ ಜನರು ರಕ್ತದಾನ ಮಾಡಲು ಹೆದರುತ್ತಿದ್ದರು, ಆದರೂ ಅಂದು 111 ಮಂದಿ ರಕ್ತದಾನ ಮಾಡಿದ್ದರು. ಅಲ್ಲಿಂದ ನಿರಂತರವಾಗಿ ದ.ಕ.ಜಿಲ್ಲೆಯಲ್ಲಿ ಯಾರೇ ರಕ್ತ ಕೇಳಿದರೂ ನಾವು ರಕ್ತವನ್ನು ಒದಗಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ, ಈಗ ಎಲ್ಲಾ ಶಾಖೆಗಳಲ್ಲಿ ನಿರಂತರವಾಗಿ ರಕ್ತದಾನ ಶಿಬಿರವನ್ನು ಮಾಡುತ್ತಾ ಬಂದಿರುತ್ತೇವೆ, ನಮ್ಮ ಶಾಖೆಯು ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹಿಂದೂ ಸಮಾಜವನ್ನು ಒಗ್ಗಟ್ಟು ಮಾಡಲು ಮತ್ತು ಸಂಸ್ಕೃತಿ ಉಳಿಸುವ ಕೆಲಸವನ್ನು ಮಾಡುತ್ತಿದೆ, ಬಗಂಬಿಲ ಶಾಖೆಯವರು ನಿರಂತರವಾಗಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.


ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿಯ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು. ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿಯ ಅಧ್ಯಕ್ಷ ಯಶೋಧರ ಚೌಟ, ಬಜಾಲ್ ಕಾವು ಪಂಚಲಿಂಗೇಶ್ವರ ಮೊಕ್ತೇಸರ ಕಿರಣ್ ರೈ ಬಜಾಲ್, ಎಂ.ಆರ್.ಪಿ.ಎಲ್ ಅಧಿಕಾರಿ ನಾಗರಾಜ್ ಶೆಟ್ಟಿಅತ್ತಾವರ,ಬಿ.ಜೆ.ಪಿ ಕೈಗಾರಿಕಾ ಪ್ರಕೋಷ್ಠದ ಸಂಚಾಲಕ ಜನಾರ್ಧನ ಅರ್ಕುಳ, ಉದ್ಯಮಿ ಸಮಾಜ ಸೇವಕ ಶ್ರೀಕಾಂತ್ ಉಳ್ಳಾಲ ಬೈಲ್, ಬಗಂಬಿಲ ಮಹಾದೇವಿ ಮಂದಿರದ ಅಧ್ಯಕ್ಷ ವೇಣುಗೋಪಾಲ್ ಬಗಂಬಿಲ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಹಿಂದೂ ಯುವಸೇನೆ ಪ್ರಮುಖ ರವಿ ಎಕ್ಕೂರು, ಹಿಂದೂ ಯುವ ಸೇನೆ ಶ್ರೀ ಮಹಾದೇವಿ ಶಾಖೆ ಬಗಂಬಿಲ ಅಧ್ಯಕ್ಷ ಅಶೋಕ್ ಪೂಜಾರಿ ಬಗಂಬಿಲ ಮೊದಲಾದವರು ಉಪಸ್ಥಿತರಿದ್ದರು.


ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಸರಿ ಮಿತ್ರವೃಂದ ಸೇವಾ ಟ್ರಸ್ಟ್ ಅಧ್ಯಕ್ಷ ಸತ್ಯನಾರಾಯಣ ಹೂಡೆ ಕುಂಪಲ ಮತ್ತು ತೊಕ್ಕೋಟ್ಟು ಸಾಯಿ ಪರಿವಾರ್ ಸೇವಾಟ್ರಸ್ಟ್ ಸಂಸ್ಥೆಯ ಪರವಾಗಿ ಹಿತೇಶ್ ಉಳ್ಳಾಲ ಬೈಲ್ ಹಾಗೂ ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ರಕ್ತ ನಿಧಿ ಸಂಚಾಲಕರಾದ ನಿಶಾಂತ್ ಜಪ್ಪಿನ ಮುಗೇರ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 92 ಯುನಿಟ್ ರಕ್ತವನ್ನು ದಾನಿಗಳು ನೀಡಿದರು. ಕುಮಾರಿ ವೈಷ್ಣವಿ ಪ್ರಾರ್ಥಿಸಿದರು, ಸಂದೀಪ್ ಕುಂಪಲ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

vtv vitla
vtv vitla

- Advertisement -

Related news

error: Content is protected !!