Saturday, April 27, 2024
spot_imgspot_img
spot_imgspot_img

ಹಿಜಾಬ್ ತೀರ್ಪು: ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ ಬೆಂಬಲ ಸೂಚಿಸಿದ ಮುಸ್ಲಿಂ ವರ್ತಕರು

- Advertisement -G L Acharya panikkar
- Advertisement -
vtv vitla
vtv vitla

ದಕ್ಷಿಣ ಕನ್ನಡ: ಹೈಕೋರ್ಟ್ ತನ್ನ ಮಹತ್ವದ ತೀರ್ಪು ಪ್ರಕಟಿಸಿದೆ. ಈ ತೀರ್ಪು ಅತೃಪ್ತಿಕರವಾಗಿದೆ. ಇದು ಮುಸ್ಲಿಮರ ಸಾಂವಿಧಾನಿಕ ಧಾರ್ಮಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನು ಪರಿಗಣಿಸದೆ ಸರ್ಕಾರದ ಆಶಯದ ನಿರ್ಧಾರವನ್ನು ಎತ್ತಿಹಿಡಿಯುವಂತಿದೆ ಎಂದು ಮುಸ್ಲಿಂ ಒಕ್ಕೂಟಗಳು ಗುರುವಾರದಂದು ಬಂದ್ ಕರೆ ನೀಡಿದೆ. ಈ ಹಿನ್ನಲೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಮಾಲೀಕತ್ವದ ಹಲವು ಅಂಗಡಿ , ಮಳಿಗೆಗಳು ತೆರೆಯದೆ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದೆ.

ಸೆಂಟ್ರಲ್ ಮಾರ್ಕೆಟ್ , ಸ್ಟೇಟ್ ಬ್ಯಾಂಕ್ ರೋಡ್ ಸೈಡ್ ಅಂಗಡಿಗಳು, ಧಕ್ಕೆಯಲ್ಲಿ ಮುಸ್ಲಿಂರ ಹಲವು ಅಂಗಡಿಗಳು ವ್ಯವಹಾರ ಚಟುವಟಿಯನ್ನು ಸ್ಥಗಿತಗೊಳಿಸಿದೆ. ಅಮೀರ್-ಇ-ಶರಿಯತ್ ಕರೆ ನೀಡಿರುವ ಬಂದ್ ಗೆ ಕರಾವಳಿಯ ಬಹುತೇಕ ಮುಸ್ಲಿಂ ಸಂಘಟನೆಗಳು ಬೆಂಬಲ ನೀಡಿದೆ.

ಬಂದ್ ಶಾಂತಿಯುತವಾಗಿರಬೇಕು. ಯಾರೂ ಒತ್ತಾಯ ಮಾಡಬಾರದು. ಯಾವುದೇ ಪ್ರತಿಭಟನಾ ಸಭೆಗಳು ನಡೆಯಬಾರದು ಎಂದು ಅಮೀರ್-ಇ-ಶರಿಯತ್ ಹೇಳಿತ್ತು. ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ.

- Advertisement -

Related news

error: Content is protected !!