Thursday, March 28, 2024
spot_imgspot_img
spot_imgspot_img

“ಹೆತ್ತವರಿಂದ ಮಗು ದತ್ತು ಪಡೆದು ಪೋಷಿಸುವುದು ಅಪರಾಧವಲ್ಲ” – ಹೈಕೋರ್ಟ್ ಆದೇಶ

- Advertisement -G L Acharya panikkar
- Advertisement -

ನೇರವಾಗಿ ಹೆತ್ತವರಿಂದ ಮಗುವನ್ನು ದತ್ತು ಪಡೆದುಕೊಂಡು ಪೋಷಣೆ ಮಾಡುವುದು ಅಪರಾಧವಲ್ಲ ಎಂದು ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ.

Adopt A Baby: Know These Basics Before Making Your Decision

ದಂಪತಿಯೋರ್ವರು ನಿಯಮ ಪಾಲಿಸದೆ ಮಗುವನ್ನು ದತ್ತು ಪಡೆದಿದ್ದಾರೆ ಎಂದು ತಮ್ಮ ಮೇಲೆ ದಾಖಲಾಗಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್‌ ಈ ಆದೇಶ ನೀಡಿದೆ. ನ್ಯಾ. ಹೇಮಂತ್‌ ಚಂದನಗೌಡರ್‌ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

2018ರ ಸೆ.18ರಂದು ಮೆಹಬೂಬ್‌ ಸಾಬ್‌ ನಬಿಸಾಬ್‌ ಅವರ ಪತ್ನಿ ಬಾನು ಬೇಗಂ ಅವರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಈ ವೇಳೆ ಮಕ್ಕಳಾಗದ ಹಿನ್ನೆಲೆಯಲ್ಲಿ ಜರೀನಾ ಬೇಗಂ ಮತ್ತು ಅಬ್ದುಲ್‌ ಸಾಬ್‌ ಹುಡೇದಮನಿ ಅವರು ಒಂದು ಮಗುವನ್ನು ಮೆಹಬೂಬ್-ಬಾನು ಬೇಗಂ ದಂಪತಿಯಿಂದ ದತ್ತು ಪಡೆದು ಸಾಕುತ್ತಿದ್ದು. ಇದಕ್ಕಾಗಿ 20 ರೂ. ಸ್ಟಾಂಪ್‌ ಪೇಪರ್‌ ಮೇಲೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ದಂಪತಿ ನಿಯಮ ಪಾಲಿಸದೆ ನೇರವಾಗಿ ಹೆತ್ತವರಿಂದ ಮಗುವನ್ನು ದತ್ತುಪಡೆದುಕೊಂಡು ಸಾಕುತ್ತಿದ್ದಾರೆ ಎಂದು ಅವರ ವಿರುದ್ದ ಪ್ರಕರಣ ದಾಖಲಾಗಿತ್ತು. ಆದರೆ ಪ್ರಸ್ತುತ ಈ ಪ್ರಕರಣವನ್ನು ರದ್ದುಗೊಳಿಸಿರುವ ಹೈಕೋರ್ಟ್ ಈ ಮಹತ್ವದ ಆದೇಶ ನೀಡಿದೆ.

ಬಾಲ ನ್ಯಾಯ (ಆರೈಕೆ ಮತ್ತು ಮಕ್ಕಳ ರಕ್ಷಣಾ) ಕಾಯಿದೆ- 2015ರ ಸೆಕ್ಷನ್‌ 80ರ ಅನ್ವಯ ಮಗು ಅನಾಥ, ನಿರಾಶ್ರಿತವಾಗಿದ್ದರೆ ಅಥವಾ ಬಾಲಮಂದಿರಗಳಲ್ಲಿ ಬೆಳೆಯುತ್ತಿರುವ ಮಗುವಾದರೆ ಅಂತಹ ಮಗುವನ್ನು ದತ್ತು ಪಡೆಯುವ ವೇಳೆ ನಿಯಮಗಳು ಅನ್ವಯಿಸುತ್ತವೆ. ಬಾಲ ಕಾಯಿದೆ ನಿಯಮಗಳನ್ನು ಪಾಲಿಸದೆ ಇಂತಹ ಮಕ್ಕಳನ್ನು ದತ್ತು ತೆಗೆದುಕೊಳ್ಳುವಂತಿಲ್ಲ. ಆದರೆ ಈ ಮಗುವನ್ನು ನೇರವಾಗಿ ಪೋಷಕರಿಂದಲೇ ದತ್ತು ಪಡೆದುಕೊಂಡಿರುವುದರಿಂದ ಅಂತಹ ಯಾವುದೇ ನಿಯಮ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

- Advertisement -

Related news

error: Content is protected !!