Thursday, March 28, 2024
spot_imgspot_img
spot_imgspot_img

ಹೆತ್ತ ಮಗುವನ್ನೇ ಮಾರಾಟ ಮಾಡಿದ ತಾಯಿ!

- Advertisement -G L Acharya panikkar
- Advertisement -
driving

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮಗು ಮಾರಾಟ ಪ್ರಕರಣ ನಡೆದಿದ್ದು, ಹೆತ್ತಮ್ಮನೇ 5,000 ರೂಪಾಯಿಗೆ ಗಂಡು ಮಗು ಮಾರಾಟ ಮಾಡಿರುವುದು ವರದಿಯಾಗಿದೆ. ಮಗು ಮಾರಾಟ ಮಾಡಿರುವ ಮಹಿಳೆ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರೇಣುಕಾ ಎಂದು ತಿಳಿದುಬಂದಿದೆ.

ಜಿಲ್ಲಾಸ್ಪತ್ರೆಯ ಸ್ಟಾಫ್​​ ನರ್ಸ್ ಕಸ್ತೂರಿ ಮತ್ತು ಆಕೆ ಪತಿಯ ಕೈವಾಡ ಶಂಕೆ ವ್ಯಕ್ತವಾಗಿತ್ತು. ಪ್ರಕರಣದಲ್ಲಿ ಜಿಲ್ಲಾಸ್ಪತ್ರೆಯ ಸ್ಟಾಫ್​​ ನರ್ಸ್ ಕಸ್ತೂರಿ ಅವರನ್ನು ಕೆಲಸದಿಂದ ಅಮಾನತು ಮಾಡಲು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್​ ಎಲ್​ ಲಕ್ಕಮ್ಮಣವರ ಆದೇಶಿಸಿದ್ದಾರೆ. ಸ್ಟಾಫ್​​ ನರ್ಸ್ ಕಸ್ತೂರಿಯ ಪತಿ ಮಂಜುನಾಥ​ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಈ ಮಧ್ಯೆ ಮಗು ಇನ್ನೂ ಪತ್ತೆಯಾಗಿಲ್ಲ. ಜಿಲ್ಲಾ ಪೊಲೀಸರಿಂದ ಶೋಧ ಕಾರ್ಯ ನಡೆದಿದೆ.

- Advertisement -

Related news

error: Content is protected !!