Tuesday, June 9, 2026
spot_imgspot_img
spot_imgspot_img

ಹೆಬ್ರಿ: ರಾಜ್ಯ ಮಟ್ಟದ ಕ್ರಿಕೆಟ್‌ ಆಟಗಾರ ಮೃತ್ಯು

- Advertisement -
- Advertisement -

ಹೆಬ್ರಿ: ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರನೊಬ್ಬ ಬ್ರೈನ್ ಟ್ಯೂಮರ್‌ನಿಂದಾಗಿ ಸಾವನ್ನಪ್ಪಿದ ಘಟನೆ ಹೆಬ್ರಿಯಲ್ಲಿ ಭಾನುವಾರ ನಡೆದಿದೆ.

ಪೆರ್ಡೂರು ಬುಕ್ಕಿಗುಡ್ಡೆ ರಕ್ಷಿತ್ ಶೆಟ್ಟಿ (29) ಮೃತ ಯುವಕ.

ಗೆಳೆಯರ ಬಳಗ ಪೆರ್ಡೂರು ತಂಡದ ಮೂಲಕ ರಕ್ಷಿತ್ ಶೆಟ್ಟಿ ಕ್ರಿಕೆಟ್ ಆಟವನ್ನು ಪ್ರಾರಂಭಿಸಿದ್ದರು. ಬಳಿಕ ವಿವಿಧ ಜಿಲ್ಲಾ ಮಟ್ಟದ ತಂಡಗಳಲ್ಲಿ ಆಡಿ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ರಾಜ್ಯ ಮಟ್ಟದಲ್ಲಿಯೂ ರಕ್ಷಿತ್ ಗುರುತಿಸಿಕೊಂಡಿದ್ದರು.

ಬೌಲಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಅವರು, ತಮ್ಮ ಆಕರ್ಷಕ ಶೈಲಿಯ ಬೌಲಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳಿಂದ ಪ್ರಶಂಸೆ ಗಿಟ್ಟಿಸಿಕೊಂಡಿದ್ದರು. ಎಸ್.ಝಡ್‌‌.ಸಿ.ಸಿ ಮತ್ತು ಎಮ್‌.ಬಿ.ಸಿ.ಸಿ ತಂಡಗಳ ಪರವಾಗಿ ಆಡಿದ್ದರು.

- Advertisement -

Related news

error: Content is protected !!