Monday, June 22, 2026
spot_imgspot_img
spot_imgspot_img

ಹೊಟೇಲ್‌ನಲ್ಲಿ ರಹಸ್ಯ ಕ್ಯಾಮರಾ ಇಟ್ಟು‌ ಜೋಡಿಗಳ ಖಾಸಗಿ ವಿಡಿಯೋ ರೆಕಾರ್ಡ್; ಹಣಕ್ಕಾಗಿ ಬ್ಲ್ಯಾಕ್‌‌ಮೇಲ್‌

- Advertisement -
- Advertisement -

ಉತ್ತರ ಪ್ರದೇಶ: ಕಿಡಿಗೇಡಿಗಳ ಗುಂಪೊಂದು ಓಯೋ ಹೊಟೇಲ್‌ನಲ್ಲಿ ರಹಸ್ಯ ಕ್ಯಾಮರಾ ಇರಿಸಿ ಜೋಡಿಗಳ ಖಾಸಗಿ ದೃಶ್ಯ ಚಿತ್ರೀಕರಿಸಿ ಹಣ ನೀಡುವಂತೆ ಬ್ಲ್ಯಾಕ್‌ ‌ಮೇಲ್‌ ಮಾಡಿದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಘಟನೆ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ವಿಷ್ಣು ಸಿಂಗ್, ಅಬ್ದುಲ್ ವಹಾವ್, ಪಂಕಜ್ ಕುಮಾರ್ ಮತ್ತು ಅನುರಾಗ್ ಕುಮಾರ್ ಸಿಂಗ್ ಬಂಧಿತ ಆರೋಪಿಗಳು. ಬಂಧಿತರಿಂದ 21 ಮೊಬೈಲ್‌ ಫೋನ್‌, 22 ಎಟಿಎಂ ಕಾರ್ಡ್‌, ಒಂದು ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. ಹಲವು ಸುಳ್ಳು ದಾಖಲೆಗಳೂ ಪತ್ತೆಯಾಗಿವೆ.

ಓಯೋ ಹೋಟೇಲ್ ರೂಂಗೆ ಹೋಗುತ್ತದ್ದ ಆರೋಪಿಗಳು ಅಲ್ಲಿಂದ ಹೊರಡುವ ಮೊದಲು ರಹಸ್ಯ ಕ್ಯಾಮರಾ ಇಡುತ್ತಿದ್ದರು. ಸ್ವಲ್ಪ ದಿನ ಕಳೆದು ಮತ್ತೆ ಹೋಗಿ ಕ್ಯಾಮರಾಗಳನ್ನು ವಾಪಾಸ್ ತರುತ್ತಿದ್ದರು. ಆ ಬಳಿಕ ಆ ರೂಂನಲ್ಲಿ ತಂಗಿದ ಗ್ರಾಹಕರ ಖಾಸಗಿ ವೀಡಿಯೋಗಳನ್ನು ನೋಡಿ ಅವರನ್ನು ಸಂಪರ್ಕಿಸಿ ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದರು. ಇಲ್ಲವಾದಲ್ಲಿ ವೀಡಿಯೋ ಲೀಕ್ ಮಾಡುವುದಾಗಿ ಬೆದರಿಸುತ್ತಿದ್ದರು. ವಿಷ್ಣು ಸಿಂಗ್ ಮತ್ತು ಅಬ್ದುಲ್ ವಹಾವ್ ಈ ರೀತಿ ಬೆದರಿಕೆ ಹಾಕುತ್ತಿದ್ದರೆ, ಪಂಕಜ್ ನೋಂದಾಯಿತ ಸಿಮ್‌ಗಳನ್ನು ಆರೋಪಿಗಳಿಗೆ ನೀಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಗ್ಯಾಂಗ್‌ನಲ್ಲಿದ್ದ ಇನ್ನೊಬ್ಬ ಆರೋಪಿ ನಾಪತ್ತೆಯಾಗಿದ್ದು, ಅವನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಇವರ ಕೃತ್ಯಗಳೆಲ್ಲವೂ ಪ್ಲ್ಯಾನ್‌ ಪ್ರಕಾರವೇ ನಡೆಯುತ್ತಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

- Advertisement -

Related news

error: Content is protected !!