Friday, March 29, 2024
spot_imgspot_img
spot_imgspot_img

ಹೊಸ ಮದರಸಾಗಳಿಗೆ ಅನುದಾನ ಬಂದ್.!

- Advertisement -G L Acharya panikkar
- Advertisement -

ಈಗಾಗಲೇ ಮದರಸಾಗಳಲ್ಲಿ ರಾಷ್ಟ್ರಗೀತೆಗಳನ್ನು ಕಡ್ಡಾಯಗೊಳಿಸಿರುವ ಉತ್ತರಪ್ರದೇಶ ಸರ್ಕಾರವು ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಹೊಸ ಮದರಸಾಗಳಿಗೆ ಯಾವುದೇ ಅನುದಾನವನ್ನು ನೀಡಲ್ಲ ಎಂದು ಉತ್ತರ ಪ್ರದೇಶದ ಕ್ಯಾಬಿನೆಟ್‍ನಲ್ಲಿ ಬಿಲ್ ಪಾಸ್ ಆಗಿದೆ.

ASSAM MADARASA MADRASA

ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸಂಪುಟವು ಹೊಸ ಮದರಸಾಗಳನ್ನು ಅನುದಾನದ ಪಟ್ಟಿಯಿಂದ ಹೊರಗಿಡುವ ಪ್ರಸ್ತಾಪವನ್ನು ಕ್ಯಾಬಿನೆಟ್ ಸಭೆಯಲ್ಲಿ ಅಂಗೀಕರಿಸಲಾಗಿದೆ. ಸಭೆಯು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು ಮತ್ತು ಯುಪಿ ಸಂಪುಟದ ಎಲ್ಲಾ ಮಂತ್ರಿಗಳು ಭಾಗವಹಿಸಿದ್ದರು.

ಈ ಮೂಲಕ ಯೋಗಿ ಸರ್ಕಾರವು ರಾಜ್ಯಾದ್ಯಂತ ಹೊಸ ಮದರಸಾಗಳಿಗೆ ಅನುದಾನ ನೀಡುವ ಎಲ್ಲಾ ಮಾರ್ಗಗಳನ್ನು ರದ್ದುಗೊಳಿಸಿದೆ. ಮದರಸಾಗಳಿಗೆ ಅನುದಾನ ನೀಡಲು ಹಿಂದಿನ ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ನೀತಿಯನ್ನು 2016ರಲ್ಲಿ ಯೋಗಿ ಸರ್ಕಾರ ರದ್ದುಗೊಳಿಸಿತ್ತು. ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಂಡಿಸಿದ ಪ್ರಸ್ತಾವನೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

- Advertisement -

Related news

error: Content is protected !!