Tuesday, April 20, 2021
spot_imgspot_img
spot_imgspot_img

ಅಫ್ಘಾನಿಸ್ಥಾನ: ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್‌ ಬಾಂಬ್ ಸ್ಪೋಟದಲ್ಲಿ ನಿಧನ.!

ಕಾಬೂಲ್‌: ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಲ್ಲಿ ಅಂಪೈರ್‌ ಆಗಿದ್ದ ಅಫ್ಘಾನಿಸ್ತಾನದ ಬಿಸ್ಮಿಲ್ಲಾ ಜಾನ್‌ ಶೆನ್ಸಾರಿ(36) ಬಾಂಬ್‌ ಸ್ಫೋಟಕ್ಕೆ ಬಲಿಯಾಗಿದ್ದಾರೆ.

ನಂಗರ್‌ಹಾರ್ ಪ್ರಾಂತ್ಯದಲ್ಲಿ ಶನಿವಾರ ಮಧ್ಯಾಹ್ನ ಬಾಂಬ್ ಸ್ಪೋಟ ನಡೆದಿತ್ತು. ನಂಗರ್‌ಹಾರ್ ನ ಗವರ್ನರ್ ರ ಮನೆಯ ಎದುರಿನ ರಸ್ತೆಯಲ್ಲಿ ಈ ಸ್ಪೋಟ ನಡೆದಿದೆ. ಅಫ್ಘಾನ್ ಮಾಧ್ಯಮಗಳ ವರದಿಯ ಪ್ರಕಾರ, ಕೆಲವು ಬಂದೂಕುಧಾರಿಗಳು ಮನೆಗೆ ನುಗ್ಗಲು ಪ್ರಯತ್ನಿಸಿದ್ದರು, ಕೂಡಲೇ ಭದ್ರತಾ ಪಡೆಗಳು ಅವರನ್ನು ಹೊಡೆದುರುಳಿಸಿದೆ.

ಘಟನೆಯಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿದ್ದರು.36 ವರ್ಷದ ಬಿಸ್ಮಿಲ್ಲಾ ಜಾನ್ ಶಿನ್ವಾರಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಅಂಪೈರ್‌ ಆಗಿದ್ದಾರೆ. ಇದುವರೆಗೆ ಆರು ಏಕದಿನ ಮತ್ತು ಆರು ಟಿ20 ಪಂದ್ಯಗಳಿಗೆ ಶಿನ್ವಾರಿ ಅಂಪೈರ್‌ ಮಾಡಿದ್ದಾರೆ.

- Advertisement -

MOST POPULAR

HOT NEWS

Related news

error: Content is protected !!