Tuesday, April 23, 2024
spot_imgspot_img
spot_imgspot_img

ಹೊಸ ವಾಹನ ಖರೀದಿಸುತ್ತೀರಾ..? ನಂಬರ್ ಪ್ಲೇಟ್ ಅಳವಡಿಸದೇ ವಾಹನ ಡೆಲಿವರಿ ಇಲ್ಲ – ಕೇಂದ್ರ ಸರ್ಕಾರ ಕಡ್ಡಾಯ

- Advertisement -G L Acharya panikkar
- Advertisement -
vtv vitla

ಸಾಮಾನ್ಯವಾಗಿ ಹೊಸ ವಾಹನ ಖರೀದಿಸುವವರು ಹಣ ಪಾವತಿಯಾದ ಕೂಡಲೇ ನೋಂದಣಿ ಮಾಡಿಸಿ, ನಂಬರ್ ಪ್ಲೇಟ್ ಬರುವ ಮುಂಚೆಯೇ ಡೆಲಿವರಿ ಪಡೆದುಕೊಳ್ಳುತಿದ್ದರು. ಆದರೆ ಈಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿರುವ ಅಂತಿಮ ಅಧಿಸೂಚನೆಯ ಪ್ರಕಾರ ಮೋಟಾರು ವಾಹನಗಳ ಕಾಯಿದೆ 1988ರ ಕಲಂ 41(6)ರ ಅನ್ವಯ ಮಾ. ಅನ್ವಯವಾಗುವಂತೆ ಅತೀ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸದೆ ಹೊಸ ವಾಹನ ಖರೀದಿಸುವವರಿಗೆ ನೀಡುವಂತಿಲ್ಲ. ಇದಕ್ಕಾಗಿ ಕೇಂದ್ರ ಮೋಟಾರು ವಾಹನಗಳ 1989ರ ನಿಯಮ 50ಕ್ಕೆ ತಿದ್ದುಪಡಿ ಮಾಡಲಾಗಿದ್ದು, 1-4- 2019ರಿಂದ ಜಾರಿಗೆ ಬರಬೇಕಿತ್ತು ಈಗ ಕಡ್ಡಾಯಗೊಳಿಸಲಾಗಿದೆ.

ಗ್ರಾಹಕರಿಗೆ ಹೊಸ ನಿಯಮದ ಮಾಹಿತಿ ಇಲ್ಲದ ಕಾರಣ ಹಣ ಪಾವತಿಸಿ, ನೋಂದಣಿಯಾದ ಕೂಡಲೇ ವಾಹನ ಹಸ್ತಾಂತರ ಮಾಡುತ್ತೆವೆ ಎಂದು ಆಗ್ರಹಿಸುತ್ತಾರೆ. ಹೊಸ ನಿಯಮದ ಬಗ್ಗೆ ಕೇಳಿದರೆ “ಇದುವರೆಗೆ ಇಲ್ಲದ ನಿಯಮ, ನೀವೇ ಮಾಡಿದ್ದಾ’ ಎಂದು ಡೀಲರ್ ಪ್ರಶ್ನಿಸುತ್ತಾರೆ ಎಂದು ಗ್ರಾಹಕರು ತಿಳಿಸಿದ್ದಾರೆ.

ಈಗ ಹೊಸ ವಾಹನಗಳನ್ನು ನೋಂದಣಿಗಾಗಿ ಆರ್‌ಟಿಒ ಕಚೇರಿಗೆ ಕೊಂಡು ಹೋಗಬೇಕಾಗಿಲ್ಲ. ಆನ್‌ಲೈನ್ ಮೂಲಕವೇ ವಾಹನಗಳ ಕಾರ್ಯ ವಿಧಾನ ನಡೆಯುತ್ತದೆ. ಗ್ರಾಹಕರು ಹಣ ಪಾವತಿಸಿದ ಕೂಡಲೇ ಸ್ವಯಂ ಆಗಿ ನೋಂದಣಿ ಸಂಖ್ಯೆ ಜನರೇಟ್ ಆಗುತ್ತದೆ. ಒಂದು ವೇಳೆ ವಿಶಿಷ್ಟ ಸಂಖ್ಯೆಯೇ ಬೇಕಿದ್ದರೆ ಆರ್‌ಟಿಒಗೆ ತೆರಳಿ ಹೆಚ್ಚು ಮೊತ್ತ ಪಾವತಿಸಿ ಪಡೆಯಬೇಕು. ನೋಂದಣಿ ಸಂಖ್ಯೆಯನ್ನು ಬಳಿಕ ನಂಬರ್ ಪ್ಲೇಟ್ ಮಾಡುವವರಿಗೆ ಕಳುಹಿಸಲಾಗುತ್ತದೆ. ಬದಲಾದ ನಿಯಮದಂತೆ ವಾಹನದ ನೋಂದಣಿಯಾದರೂ ನಂಬರ್ ಪ್ಲೇಟನ್ನು ಅಳವಡಿಸದೆ ಹೊಸ ವಾಹನವನ್ನು ಗ್ರಾಹಕರ ಕೈಗೆ ನೀಡುವಂತಿಲ್ಲ. ಗ್ರಾಹಕರು ಇದನ್ನು ಗಮನಿಸಿ ಸಹಕರಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭೀಮನಗೌಡ ಪಾಟೀಲ್ ತಿಳಿಸಿದ್ದಾರೆ.

- Advertisement -

Related news

error: Content is protected !!