Tuesday, July 8, 2025
spot_imgspot_img
spot_imgspot_img

11ನೇ ಮಹಡಿಯಿಂದ ಜಿಗಿದು ಯುವ ವೈದ್ಯ ಆತ್ಮಹತ್ಯೆ

- Advertisement -
- Advertisement -

ಬೆಂಗಳೂರು: ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ವಿಕ್ಟೋರಿಯಾ ಆಸ್ಪತ್ರೆಯ ಯುವ ವೈದ್ಯರೊಬ್ಬರು ವಸತಿ ಸಮುಚ್ಚಯದ 11ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಪೃಥ್ವಿಕಾಂತ್‌ ರೆಡ್ಡಿ (31) ಎಂದು ಗುರುತಿಸಲಾಗಿದೆ. ಮೂರು ತಿಂಗಳಿನ ಹಿಂದೆ ಮದುವೆಯಾಗಿದ್ದರು. ಇವರ ಪತ್ನಿಯೂ ವೈದ್ಯೆಯೇ ಆಗಿದ್ದಾರೆ .

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಮದುವೆಯ ಬಳಿಕ ಈ ಸಮಸ್ಯೆ ಕಂಡುಬಂದಿದ್ದರಿಂದ ಪತ್ನಿ ಹಾಗೂ ಮನೆಯವರಿಗೆ ಹೇಳಿಕೊಳ್ಳಲಾಗದೇ ಒಂದು ವಾರದಿಂದ ಖಿನ್ನತೆಗೆ ಒಳಗಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ.

ಪ್ರಥ್ವಿರಾಜ್ ರೆಡ್ಡಿ ಆಂಧ್ರ ಮೂಲದವರಾಗಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

- Advertisement -

Related news

error: Content is protected !!