Monday, June 22, 2026
spot_imgspot_img
spot_imgspot_img

1 ಕೆಜಿ ಮೀನಿನ ಮಾಂಸದ ದರ ಬರೋಬ್ಬರಿ 51 ಸಾವಿರ ರೂಪಾಯಿ..!

- Advertisement -
- Advertisement -
vtv vitla
vtv vitla
vtv vitla
vtv vitla

ಜಪಾನ್’ನಲ್ಲಿ ಸೆರೆಸಿಕ್ಕಿರುವ ಮೀನೊಂದರ ಬೆಲೆ ಎಲ್ಲರ ಹುಬ್ಬೇರಿಸಿದೆ. ಒಂದು ಕೆಜಿಗೆ ಬರೋಬ್ಬರಿ 51 ಸಾವಿರ ರೂ. ಅಂದರೆ ನೀವು ನಂಬಲೇಬೇಕು. ಆ ಮೀನಿನ ಹೆಸರು ಬ್ಲೂಫಿನ್ ಟ್ಯೂನಾ…! ಜಪಾನ್ ರಾಜಧಾನಿ ಟೊಕಿಯೋದ ಮೀನು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗಿದೆ. ಜಪಾನ್’ನಲ್ಲಿ ಮೂರನೇ ವರ್ಷದ ಹರಾಜು ಪ್ರಕ್ರಿಯೆಯಲ್ಲೂ ಈ ಮೀನು ತುಂಬಾ ಕಡಿಮೆ ಬೆಲೆಗೆ ಮಾರಾಟವಾಗಿದೆಯಂತೆ..!

211 ಕೆಜಿ ತೂಗುವ ಟ್ಯೂನಾ ಮೀನನ್ನು ಉತ್ತರ ಜಪಾನ್’ನ ಓಮಾದಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ. ಹರಾಜಿನಲ್ಲಿ 1,45,290 ಡಾಲರ್’ಗೆ ಮಾರಾಟವಾಗಿದೆ. ಭಾರತೀಯ ಕರೆನ್ಸಿಯ ಪ್ರಕಾರ ಮೀನಿನ ಬೆಲೆ 1,08,12,953 ರೂ. ಆಗಿದೆ. ಇನ್ನು ಒಂದು ಕೆಜಿಗೆ 80 ಸಾವಿರ ಜಪಾನ್ ಯೆನ್’ನಂತೆ ಮಾರಾಟವಾಗಿದೆ. ಅಂದರೆ ಒಂದು ಕೆಜಿಗೆ 51,352 ರೂಪಾಯಿ.

ಈ ಮಾಹಿತಿಯನ್ನು ಟೊಕಿಯೋ ಮಾರುಕಟ್ಟೆಯ ಅಧಿಕಾರಿಗಳು ನೀಡಿದ್ದಾರೆ. ಹರಾಜಿನಲ್ಲಿ ಜಪಾನಿನ ಸಗಟು ವ್ಯಾಪಾರಿ ಯಮಾಯುಕಿ ಮೈಕೆಲಿನ್- ಸುಶಿ ಚೈನ್ ಆಪರೇಟರ್ ಒನೊಡೆರಾ ಗ್ರೂಪ್‌ನೊಂದಿಗೆ ಸೇರಿಕೊಂಡಿ ಹರಾಜನ್ನು ಗೆದಿದ್ದಾರೆಂದು ಒನೊಡೆರಾ ಫುಡ್ ಸರ್ವೀಸ್ ವಕ್ತಾರರು ತಿಳಿಸಿದ್ದಾರೆ.

vtv vitla

- Advertisement -

Related news

error: Content is protected !!