Thursday, May 2, 2024
spot_imgspot_img
spot_imgspot_img

100ಕ್ಕೂ ಹೆಚ್ಚು ನಾವಿಕರನ್ನು ಹೊತ್ತೊಯ್ಯುತ್ತಿದ್ದ ನೌಕಾಪಡೆಯ ಹಡಗು ಮುಳುಗಡೆ

- Advertisement -G L Acharya panikkar
- Advertisement -

ವಿದ್ಯುತ್ ಕಡಿತದಿಂದಾಗಿ ಹೆಚ್ಚಿನ ಸಮುದ್ರದ ನೀರು ಹಡಗಿನೊಳಗೆ ಬಂದು ಹಡಗು ಮುಳುಗಿ 100 ಕ್ಕೂ ಅಧಿಕ ಮಂದಿ ಸಂಕಷ್ಟ ಸಿಲುಕಿದ ಘಟನೆ ವರದಿಯಾಗಿದೆ. ಥಾಯ್ ನೌಕಾಪಡೆಯ ನಾವಿಕರನ್ನು ಹೊತ್ತು ಪ್ರಯಾಣಿಸುತ್ತಿದ್ದ HTMS ಸುಖೋಥೈ ಕಾರ್ವೆಟ್ ಎಂಬ ಹೆಸರಿನ ಹಡಗು ಥಾಯ್ಲೆಂಡ್‌ನಲ್ಲಿ ಮುಳುಗಿದೆ. ಇದೀಗ ನಾವಿಕರ ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದ್ದು, ಈಗಾಗಲೇ 75 ನಾವಿಕರನ್ನು ರಕ್ಷಿಸಲಾಗಿದೆ.

ನಾವಿಕರನ್ನು ನೀರಿನಿಂದ ರಕ್ಷಿಸಲು ಹಡಗುಗಳು ಮತ್ತು ಹೆಲಿಕಾಪ್ಟರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ. ಬೆಳಗಿನ ಜಾವದ ವೇಳೆ 75 ನಾವಿಕರು ರಕ್ಷಿಸಲಾಗಿದ್ದು, 31 ಮಂದಿ ಇನ್ನೂ ನೀರಿನಲ್ಲಿದ್ದಾರೆ ಎಂದು ನೌಕಾಪಡೆ ತಿಳಿಸಿದೆ.

?? BREAKING NEWS : ಬಜಪೆ: ಸ್ತ್ರೀ ಶಕ್ತಿ ಭವನದ ಜಗಲಿಯಲ್ಲಿ ವ್ಯಕ್ತಿಯ ಶವ ಪತ್ತೆ

ಉತ್ತರ ಮತ್ತು ಮಧ್ಯ ಥೈಲ್ಯಾಂಡ್​ನಲ್ಲಿ ಈ ವರ್ಷ ಅತ್ಯಂತ ಶೀತ ತಾಪಮಾನವನ್ನು ಎದುರಿಸುತ್ತಿದೆ. ದಕ್ಷಿಣ ಥೈಲ್ಯಾಂಡ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಚಂಡಮಾರುತಗಳು ಮತ್ತು ಪ್ರವಾಹವನ್ನು ಸಂಭವಿಸುತ್ತಿದೆ. ಈ ಘಟನೆಯ ನಂತರ ಎಲ್ಲ ಹಡಗುಗಳು ದಡದಲ್ಲಿ ಇರುವಂತೆ ಎಚ್ಚರಿಕೆ ನೀಡಲಾಗಿತ್ತು.

ಬಲವಾದ ಗಾಳಿಯ ಅಬ್ಬರಕ್ಕೆ ಸಮುದ್ರದ ನೀರಿನಲ್ಲಿ ಬೃಹತ್ ಗಾತ್ರದ ಅಲೆಗಳು ಎಬ್ಬಿವೆ. ಇವುಗಳು ಹಡಗಿನ ಮೇಲೆ ಅಪ್ಪಿಳಿಸಿದ ಪರಿಣಾಮ ಹಡಗಿನ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಾಯಲ್ ಥಾಯ್ ನೌಕಾಪಡೆಯು ಮೂರು ಯುದ್ಧನೌಕೆಗಳು ಮತ್ತು ಎರಡು ಹೆಲಿಕಾಪ್ಟರ್‌ಗಳು ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಿದೆ.

ವಿದ್ಯುತ್ ಕಡಿತದಿಂದ ಹೆಚ್ಚಿನ ಸಮುದ್ರದ ನೀರು ಹಡಗಿನೊಳಗೆ ಹರಿಯುವಂತೆ ಮಾಡಿತು. ಇದರಿಂದ ಹಡಗು ಮುಳಿಗಿದೆ ಎಂದು ಹೇಳಲಾಗಿದೆ. ಯುದ್ಧನೌಕೆಯು ಪ್ರಚುವಾಪ್ ಖಿರಿ ಖಾನ್ ಪ್ರಾಂತ್ಯದ ಬಂಗ್‌ಸಫನ್ ಜಿಲ್ಲೆಯ ಪಿಯರ್‌ನಿಂದ 32 ಕಿಲೋಮೀಟರ್ (20 ಮೈಲುಗಳು) ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

- Advertisement -

Related news

error: Content is protected !!