
ಮಂಗಳೂರು: ಪಲ್ಗುನಿ ನದಿ ಹರಿಯುತ್ತಿರುವ ಇತಿಹಾಸ ಪ್ರಸಿದ್ಧ ಸುಲ್ತಾನ್ ಬತ್ತೇರಿ ಪ್ರದೇಶದ ಆಟೋ ರಿಕ್ಷಾ ನಿಲ್ದಾಣಕ್ಕೆ ನೇತ್ರಾವತಿ ಲಯನ್ಸ್ ನವರು ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಮೂಲಕ ಈ ನದಿ ಕಿನಾರೆಯಲ್ಲಿ ಕೂಡಾ ನೇತ್ರಾವತಿ ಮತ್ತು ಪಲ್ಗುಣಿ ಯ ಸಂಗಮವನ್ನು ನೆನಪಿಸಿದ್ದಾರೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಕುಡಿಪಿ ಅರವಿಂದ ಶೆಣೈ ಅವರು ಅಭಿಪ್ರಾಯ ಪಟ್ಟರು.ಇಲ್ಲಿನ ಬೋಳೂರು ಸುಲ್ತಾನ್ ಬತ್ತೇರಿ ಪ್ರದೇಶದ ಆಟೋರಿಕ್ಷಾ ನಿಲ್ದಾಣಕ್ಕೆ ನೇತ್ರಾವತಿ ಲಯನ್ಸ್ ಕ್ಲಬ್ ನವರು ಕೊಡುಗೆ ನೀಡಿದ ಕುಡಿಯುವ ನೀರಿನ ಸೌಲಭ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಗರ ಪ್ರದೇಶವಾಗಿರಲಿ ಅಥವ ಗ್ರಾಮೀಣ ಪ್ರದೇಶವಿರಲಿ ಇಲ್ಲಿ ರಿಕ್ಷಾ ಚಾಲಕರು ನೀಡುವ ಸೇವೆ ಶ್ಲಾಘನಾರ್ಹ ಎಂದವರು ಹೇಳಿದರು.
ನೇತ್ರಾವತಿ ಲಯನ್ಸ್ ಅಧ್ಯಕ್ಷೆ ವಿನಯ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂದಾಕಿನಿ ಉಪಾಧ್ಯಾಯ ಪ್ರಾರ್ಥನೆಗೈದರು. ಪ್ರಾಂತೀಯ ಅಧ್ಯಕ್ಷೆ ಗಾಯತ್ರಿ ರಾವ್, ವಲಯ ಅಧ್ಯಕ್ಷೆ ನಿರ್ಮಲ ಪ್ರಮೋದ್, ಕಾರ್ಯದರ್ಶಿ ಗಾಯತ್ರಿ ಹೆಗ್ಡೆ, ಕೋಶಾಧಿಕಾರಿ ಚಂಚಲಾಕ್ಷಿ ಶೆಟ್ಟಿ, ಬತ್ತೇರಿ ರಿಕ್ಷಾ ನಿಲ್ದಾಣ ಸಂಘದ ಅಧ್ಯಕ್ಷ ಪ್ರಾಣೇಶ್ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬತ್ತೇರಿ ರಿಕ್ಷಾ ನಿಲ್ದಾಣದ ಅಧ್ಯಕ್ಷರು, ಕಾರ್ಯದರ್ಶಿ, ಹಾಗೂ ಕೋಶಾಧಿಕಾರಿ ಯವರನ್ನು ನೇತ್ರಾವತಿ ಲಯನ್ಸ್ ಕ್ಲಬ್ ಪರವಾಗಿ ಗೌರವಿಸಲಾಯಿತು.
ಲೇಖಕ ಯಶವಂತ ಬೋಳೂರು ಕಾರ್ಯಕ್ರಮ ನಿರ್ವಹಿಸಿದರು.








