


ಮಂಗಳೂರು: Lions Clubs International ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ Lions District 317D ಜಿಲ್ಲೆಯ ಗ್ಯಾಟ್ (GAT) ತಂಡವು ಸೇವಾ ಚಟುವಟಿಕೆಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ.ಜಿಲ್ಲಾ 317 ಡಿ ವತಿಯಿಂದ ಜಿಲ್ಲಾ ಗ್ಯಾಟ್ ತಂಡದ ಸಾರಥ್ಯದಲ್ಲಿ ಇಂದಿನಂದು (ಅಕ್ಟೋಬರ್ 4) “ಮಿಷನ್ 1.5” ವಿಷಯದಡಿ ಗ್ಯಾಟ್ ಕೊಂಕ್ಲೇವ್ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಗ್ಯಾಟ್ ತಂಡದ ಮುಖ್ಯ ಸಂಯೋಜಕ ವಿಜಯ ವಿಷ್ಣು ಮಯ್ಯ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ವೃತ್ತಿಪರತೆಯಿಂದ ಕೂಡಿದ ಸಮಗ್ರ ತರಬೇತಿ ಕಾರ್ಯಕ್ರಮವಾಗಿ ಮೂಡಿಬಂದಿತು. 200ಕ್ಕೂ ಅಧಿಕ ಶಿಬಿರಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.ಕಾರ್ಯಕ್ರಮದ ವಿಶೇಷತೆಯೆಂದರೆ, ಇದರ ಮುಂದುವರಿದ ಭಾಗವಾಗಿ ತರಬೇತಿ ಕಾರ್ಯಕ್ರಮದಿಂದ ಉಳಿತಾಯಗೊಂಡ ರೂ. 75,000 ಮೊತ್ತವನ್ನು ತಂಡದ ಪರವಾಗಿ Lions District 317D Seva Trust ಗೆ ದೇಣಿಗೆಯಾಗಿ ನೀಡಲಾಯಿತು. ಈ ದೇಣಿಗೆ ಸೇವಾ ಚಟುವಟಿಕೆಗಳಿಗೆ ಮತ್ತಷ್ಟು ಬಲ ನೀಡುವಂತಾಗಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯಪಾಲ ಕುಡ್ಪಿ ಅರವಿಂದ್ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಗ್ಯಾಟ್ ತಂಡದ ಸಾಧನೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಜಿಲ್ಲಾ ದ್ವಿತೀಯ ಉಪ ರಾಜ್ಯಪಾಲ ಗೋವರ್ಧನ್ ಶೆಟ್ಟಿ ಶುಭಾಶಯಗಳನ್ನು ತಿಳಿಸಿದರು. ಸೇವಾ ಟ್ರಸ್ಟ್ ಪರವಾಗಿ ಮಾಜಿ ರಾಜ್ಯಪಾಲ ಕೆ.ಸಿ. ಪ್ರಭು ದೇಣಿಗೆಯನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಸಂಪುಟ ಸಂಯೋಜಕಿ ನಾನ್ಸಿ ಮೆಸ್ಕಾರೆನ್ಹಸ್, ಜಿಲ್ಲಾ ರಾಜ್ಯಪಾಲರ ಸಂಯೋಜಕಿ ಜ್ಯೋತಿ ಶೆಟ್ಟಿ, ಜಿಲ್ಲಾ ಹೆಚ್ಚುವರಿ ಸಂಪುಟ ಕಾರ್ಯದರ್ಶಿ ಚಂದ್ರಹಾಸ್ ರೈ, ಗ್ಯಾಟ್ ತಂಡದ ಸದಸ್ಯರಾದ ಪಿ.ವಿ. ಅನಿಲ್ ಕುಮಾರ್, ರಮಾನಂದ ನೂಜಿಪಾಡಿ, ದೇವಿಕಾ ಸೋಮಶೇಖರ್, ಜಗದೀಶ್ ಯಡಪಡಿತ್ತಾಯ ಹಾಗೂ ಲ್ಯಾನ್ಸಿ ಕಾರ್ಲೊ ಉಪಸ್ಥಿತರಿದ್ದರು.ಸಮಾರಂಭದ ಅಧ್ಯಕ್ಷತೆಯನ್ನು ವಿಜಯ ವಿಷ್ಣು ಮಯ್ಯ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ರಮಾನಂದ ನೂಜಿಪಾಡಿ ನಿರ್ವಹಿಸಿ, ಧನ್ಯವಾದ ಸಮರ್ಪಿಸಿದರು.ಈ ಕುರಿತು ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.








