Sunday, January 26, 2025
spot_imgspot_img
spot_imgspot_img

ಕಾರ್ಪೊರೇಟ್ ಕಂಪನಿಗೆ 2 ದಿನದಲ್ಲಿ 12.51 ಕೋಟಿ ವಂಚನೆ; ಬ್ಯಾಂಕ್ ಮ್ಯಾನೇಜರ್ ಸೇರಿ ನಾಲ್ವರ ಬಂಧನ..!

- Advertisement -
- Advertisement -

ಬೆಂಗಳೂರು: ಕಾರ್ಪೊರೇಟ್ ಕಂಪನಿಯೊಂದರ ಇಂಟರ್ನೆಟ್ ಆಕ್ಸೆಸ್ ಪಡೆದು ಖಾಸಗಿ ಬ್ಯಾಂಕ್ ಮ್ಯಾನೇಜರ್ ಒಬ್ಬ 2 ದಿನದಲ್ಲಿ 12 ಕೋಟಿ ರೂ.ಗೂ ಅಧಿಕ ಹಣವನ್ನು ವಂಚಿಸಿರುವ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ.

ಖಾಸಗಿ ಬ್ಯಾಂಕ್ ಮ್ಯಾನೇಜರ್ ಸೈಬರ್ ವಂಚನೆಯಲ್ಲಿ ಭಾಗಿಯಾಗಿ ಬರೋಬ್ಬರಿ 12 ಕೋಟಿ 51 ಲಕ್ಷ ರೂ. ವಂಚನೆ ಮಾಡಿದ್ದಾನೆ.

ಬೆಂಗಳೂರಿನ ಇಂದಿರಾನಗರದಲ್ಲಿ ಖಾಸಗಿ ಕಂಪನಿಯೊಂದರ ಶಾಖೆಯಿದೆ. ಆ ಶಾಖೆಯಲ್ಲಿ ಕಾರ್ಪೊರೇಟ್ ನೋಡೆಲ್ ಖಾತೆಯನ್ನು ಹೊಂದಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಬ್ಯಾಂಕ್ ಮ್ಯಾನೇಜರ್ ಕಂಪನಿಯ ಕಾರ್ಪೊರೇಟ್ ಇನ್‌ವೆಸ್ಟಮೆಂಟ್ ಬ್ಯಾಂಕಿಂಗ್ ಮನವಿಗೆ ನಿರ್ದೇಶಕರ ನಕಲಿ ಸಹಿ ಮಾಡಿ ಆಕ್ಸೆಸ್ ಪಡೆದುಕೊಂಡರು. ಇದಾದ 2 ದಿನದಲ್ಲಿ 12 ಕೋಟಿ 51 ರೂ. ಲಕ್ಷ ವಂಚನೆ ಮಾಡಿದ್ದಾನೆ.

ವಂಚನೆ ಬಗ್ಗೆ ಕಂಪನಿ ಡೈರೆಕ್ಟರ್ ನರಸಿಂಹ ವಸಂತ ಶಾಸ್ತ್ರಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬ್ಯಾಂಕ್ ಮ್ಯಾನೇಜರ್ ವೈಭವ್ ಪಿತಾಡಿಯಾ ಸೇರಿದಂತೆ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 1,83,48,000 ರೂ. ನಗದು ವಶಪಡಿಸಿಕೊಂಡಿದ್ದಾರೆ.

ತನಿಖೆ ನಡೆಸುತ್ತಿರುವ ಪೊಲೀಸರು, ಗುಜರಾತ್ ಬ್ಯಾಂಕ್‌ನ 17 ಅಪರಿಚಿತ ಅಕೌಂಟ್‌ಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಬಯಲಿಗೆಳೆದಿದ್ದಾರೆ.

- Advertisement -

Related news

error: Content is protected !!