- Advertisement -
- Advertisement -
ಮಂಗಳೂರು:-ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ಉತ್ತಮ ಮಳೆಯಾಗಿದೆ.ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಎಲ್ಲೆಡೆ ಕತ್ತಲು ಆವರಿಸಿತ್ತು.ಬಳಿಕ ಸುರಿಯಲಾರಂಭಿಸಿದ ಮಳೆ ಜಿಲ್ಲಾದ್ಯಂತ ಎಡೆಬಿಡದೆ ಸುರಿಯುತ್ತಿದೆ.ಜಿಲ್ಲೆಯ ಸುಳ್ಯ,ಸುಬ್ರಹ್ಮಣ್ಯ,ಬೆಳ್ತಂಗಡಿ, ಪುತ್ತೂರು,ವಿಟ್ಲ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ.
ಮುಂದಿನ 24 ಗಂಟೆ ಇದೇ ರೀತಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು,ಮೀನುಗಾರರು ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಜೊತೆ ಇಂದಿನಿಂದ ಲಾಕ್ ಡೌನ್ ಇರೋ ಹಿನ್ನಲೆಯಲ್ಲಿ ಜನ ಬೆಚ್ಚಗೆ ಮನೆಯಲ್ಲೇ ಲಾಕ್ ಆಗಿದ್ದಾರೆ.
- Advertisement -