
ಮುಂಬೈ: ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಂ ಮೂಲಕ ಭಾವನಾತ್ಮಕ ಪೋಸ್ಟ್ ಗಳನ್ನು ಹಂಚಿಕೊಂಡಿದ್ದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನೇ ನಿಷ್ಕ್ರಿಯಗೊಳಿಸಿದ್ದಾರೆ. ಆಸ್ಪತ್ರೆಗೆ ಆಪ್ತರೊಬ್ಬರನ್ನು ಭೇಟಿಯಾಗಲು ಹೋದಾಗ ತಮ್ಮ ಗೌಪ್ಯತೆಯನ್ನು ಅಗೌರವಿಸಿ ಫೋಟೋ ತೆಗೆಯಲು ಮುಂದಾದ ಪಾಪರಾಝಿ ಫೋಟೋಗ್ರಾಫರ್ ಗಳ ವಿರುದ್ಧ ಅವರು ಇನ್ಸ್ಟಾಗ್ರಾಂ ಖಾತೆಯಲ್ಲಿ ವಾಗ್ದಾಳಿ ನಡೆಸಿದ್ದರು.ತಮ್ಮ ಇನ್ಸ್ಟಾಗ್ರಾಂ ಖಾತೆ ನಿಷ್ಕ್ರಿಯಗೊಳಿಸಿರುವ ಬಗ್ಗೆ ಸಲ್ಮಾನ್ ಖಾನ್ ಅಧಿಕೃತ ಹೇಳಿಕೆ ನೀಡದೆ ಇದ್ದರೂ, ಪಾಪರಾಝಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಈ ಬದಲಾವಣೆ ಕಂಡುಬಂದಿದೆ. ಸಲ್ಮಾನ್ ಖಾನ್ ಭಾವನಾತ್ಮಕವಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಗಳನ್ನು ಹಾಕಿರುವುದು ಅವರ ಅಭಿಮಾನಿಗಳ ನೋವಿಗೆ ಕಾರಣವಾಗಿತ್ತು. ಅಂದು ತಡರಾತ್ರಿಯವರೆಗೂ ಸಲ್ಮಾನ್ ಖಾನ್ ಹೊಸ ಅಪ್ಡೇಟ್ಗಳನ್ನು ಹಂಚಿಕೊಳ್ಳುತ್ತಲೇ ಇದ್ದರು.ಸಲ್ಮಾನ್ ಖಾನ್ ಹಿಂದೂಜಾ ಆಸ್ಪತ್ರೆಯ ಹೊರಗೆ ನಿಂತಿರುವುದನ್ನು ತೋರಿಸುವ ಹಲವು ವೀಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದವರು. ಪಾಪರಾಝಿಗಳ ಉಪಸ್ಥಿತಿಯಿಂದ ಅವರು ಕಿರಿಕಿರಿಗೊಂಡಿದ್ದರು. ಟ್ರಾಫಿಕ್ ಸಿಗ್ನಲ್ ನಲ್ಲಿ ಅವರ ಕಾರನ್ನು ಗಮನಿಸಿದ ನಂತರ ಛಾಯಾಗ್ರಾಹಕರು ಆಸ್ಪತ್ರೆಗೆ ನಟನನ್ನು ಹಿಂಬಾಲಿಸಿದ್ದರು.ಆಸ್ಪತ್ರೆಯಲ್ಲಿ ಮೌನವಹಿಸುವಂತೆ ಸಲ್ಮಾನ್ ಕೇಳಿಕೊಂಡಿದ್ದರು. ಅದಾದ ಬಳಿಕ ರಾತ್ರಿ ಆಕ್ರೋಶದಿಂದ ಇನ್ಸ್ಟಾಗ್ರಾಂನಲ್ಲಿ ಪಾಪರಾಝಿ ಫೋಟೋಗ್ರಾಫರ್ ಗಳ ವಿರುದ್ಧ ಟೀಕಿಸುವ ಸಾಮಾಜಿಕ ಮಾಧ್ಯಮದ ಪೋಸ್ಟ್ ಗಳನ್ನು ಹಂಚಿಕೊಂಡಿದ್ದರು. “ಯಾರದ್ದೋ ನೋವನ್ನು ಕಂಡು ಸಂತೋಷಪಡಬೇಡಿ” ಎಂದು ಹೇಳುವ ಮೂಲಕ ಬೈಗುಳಗಳ ಜೊತೆಗೆ ಅನೇಕ ಸೆಲ್ಫಿಗಳನ್ನು ಹಂಚಿಕೊಂಡಿದ್ದರು.“ತಾನು ಸದಾ ಮಾಧ್ಯಮವನ್ನು ಬೆಂಬಲಿಸಿದ್ದೇನೆ, ಫೋಟೋಗ್ರಾಫರ್ ತಮ್ಮ ಕೆಲಸದಿಂದ ಜೀವನ ನಡೆಸುವುದನ್ನು ಖಚಿತಪಡಿಸಿಕೊಂಡಿದ್ದೇನೆ. ಆದರೆ ಒಬ್ಬರ ಕಷ್ಟದ ದಿನಗಳಲ್ಲಿ ಆನಂದಪಡಲು ಪ್ರಯತ್ನಿಸುವ ಯಾರನ್ನೇ ಆದರೂ ದೂಷಿಸುತ್ತೇನೆ. ಎಲ್ಲಕ್ಕೂ ಒಂದು ಸೀಮೆ ಇದೆ” ಎಂದು ಅವರು ಬರೆದುಕೊಂಡಿದ್ದರು.“ದುಃಖದಲ್ಲಿರುವಾಗ ಹೀಗೆ “ಬಾಯಿ ಒಂದು ಫೋಟೋ” ಎನ್ನುವ ಮಾತನ್ನು ನನ್ನ ಮುಂದೆ ಹೇಳಿ ನೋಡಿ. ಏನಾಗುತ್ತದೆ ಎಂದು ಆಗ ನೋಡಿ. ನಿಮ್ಮ ಆಪ್ತರು ಯಾರಾದರೂ ಆಸ್ಪತ್ರೆಯಲ್ಲಿರುವಾಗ ನಾನು ಹೀಗೆ ಪ್ರತಿಕ್ರಿಯಿಸಿದ್ದೇನೆಯೆ? ನನಗೆ 60 ವರ್ಷ ವಯಸ್ಸಾಗಿದೆ. ಆದರೆ ನಾನಿನ್ನೂ ಹೋರಾಟವನ್ನು ಮರೆತಿಲ್ಲ. ಇದನ್ನು ನೆನಪಿಡಿ, ನಿಮ್ಮನ್ನು ಜೈಲಿಗೆ ತಳ್ಳಬಹುದು” ಎಂದು ಅವರು ಹೇಳಿದ್ದಾರೆ.ಅದಾದ ಮರುದಿನ ಸಲ್ಮಾನ್ ಖಾನ್ ಅವರು ರಿತೇಶ್ ದೇಶ್ಮುಖ್ ಅವರ ‘ರಾಜಾ ಶಿವಾಜಿ’ ಸಿನಿಮಾದ ಯಶಸ್ಸಿನ ಪಾರ್ಟಿಯಲ್ಲಿ ಭಾಗವಹಿಸಿದಾಗ ಪಾಪರಾಝಿಗಳು ಅವರ ಬಳಿ ಕ್ಷಮೆಯಾಚಿಸಿದ್ದರು.ವೃತ್ತಿಜೀವನದಲ್ಲಿ ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಸಿನಿಮಾ ‘ಮಾತೃಭೂಮಿ’ ಬಿಡುಗಡೆಗೆ ಸಿದ್ಧವಾಗುತ್ತಿದೆ. ಅವರು ನಯನತಾರ ನಾಯಕಿಯಾಗಿರುವ ನಿರ್ದೇಶಕ ವಂಶಿ ಪೈಡಿಪಳ್ಳಿ ಅವರ ಹೊಸ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.








