Monday, July 20, 2026
spot_imgspot_img
spot_imgspot_img

ನನ್ನೊಂದಿಗೆ ಫೋಟೊ ತೆಗೆದುಕೊಳ್ಳಲು ಹಣ ಕೊಡಬೇಕು ಎಂದು ಮಕ್ಕಳಿಗೆ ತಮಾಷೆ ಮಾಡಿದ ವೈಭವ್ ಸೂರ್ಯವಂಶಿ

- Advertisement -
- Advertisement -

ಹೊಸದಿಲ್ಲಿ, ಎ.27: ‘‘ನನ್ನೊಂದಿಗೆ ಫೋಟೊ ತೆಗೆಸಿಕೊಳ್ಳಬೇಕಾದರೆ ನೀವು ಹಣ ನೀಡಬೇಕಾಗುತ್ತದೆ’’ ಎಂದು ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರು ಪುಟಾಣಿ ಅಭಿಮಾನಿಗಳಿಗೆ ವಿಮಾನ ನಿಲ್ದಾಣದಲ್ಲಿ ತಮಾಷೆ ಮಾಡಿದ ಘಟನೆ ನಡೆದಿದೆ.ತನ್ನೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಬಂದ ಇಬ್ಬರು ಮಕ್ಕಳೊಂದಿಗಿದ್ದ ಸೂರ್ಯವಂಶಿ ತಮಾಷೆ ಮಾಡುತ್ತಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಹಂಚಿಕೊಂಡಿದೆ.

ಇಬ್ಬರು ಮಕ್ಕಳು ಸೂರ್ಯವಂಶಿ ಬಳಿ ತೆರಳಿ ತಮ್ಮೊಂದಿಗೆ ಫೋಟೊ ತೆಗೆಸಿಕೊಳ್ಳುವಂತೆ ಕೇಳಿಕೊಂಡವು. ಅದಕ್ಕೆ ಸಮ್ಮತಿಸಿದ ಸೂರ್ಯವಂಶಿ, ತನ್ನೊಂದಿಗೆ ಫೋಟೊ ತೆಗೆಯಬೇಕಾದರೆ ಹಣ ನೀಡಬೇಕು. ಉಚಿತವಾಗಿ ನೀಡುವುದಿಲ್ಲ ಎಂದು ಹೇಳುತ್ತಿರುವುದು ವೀಡಿಯೊದಲ್ಲಿದೆ.‘

ಬ್ರದರ್, ನಾನು ಫೋಟೊಗಳನ್ನು ತೆಗೆಯಲು ಶುಲ್ಕ ವಿಧಿಸುತ್ತೇನೆ. ಇದನ್ನು ನಾನು ಗಂಭೀರವಾಗಿಯೇ ಹೇಳುತ್ತಿದ್ದೇನೆ’’ ಎಂದು ಸೂರ್ಯವಂಶಿ ಹೇಳಿದಾಗ ಮಕ್ಕಳು ಆಶ್ಚರ್ಯ ಚಕಿತರಾದರು.ಮಕ್ಕಳು 200 ರೂ. ಹಿಡಿದುಕೊಂಡು ಬಂದು ಸೂರ್ಯವಂಶಿ ಅವರೊಂದಿಗೆ ಫೋಟೊ ತೆಗೆಸಿಕೊಂಡರು. ಆ ನಂತರ ಸೂರ್ಯವಂಶಿ ಅವರು ನಾನು ತಮಾಷೆ ಮಾಡಿದ್ದು ಎಂದು ಹೇಳಿ, ಹಣ ವಾಪಸ್ ನೀಡಿದರು.

ಆ ಮಕ್ಕಳೊಂದಿಗೆ ಕೆಲವು ಫೋಟೊಗಳನ್ನು ತೆಗೆಸಿಕೊಂಡರು.ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ಸೂರ್ಯವಂಶಿ ಅವರನ್ನು ಎಸ್ಆರ್‌ಎಚ್‌ ನಾಯಕ ಪ್ಯಾಟ್ ಕಮಿನ್ಸ್ ಶ್ಲಾಘಿಸಿದರು. ‘‘ಸೂರ್ಯವಂಶಿ ನನ್ನ ನೆಚ್ಚಿನ ಆಟಗಾರನಾಗಿದ್ದಾರೆ. ಆತ ಚೆಂಡನ್ನು ಜೋರಾಗಿ ಹೊಡೆಯುತ್ತಾರೆ. ಅವರ ಆಟ ನೋಡುವುದೇ ಚಂದ’’ ಎಂದು ಕಮಿನ್ಸ್ ಹೇಳಿದ್ದಾರೆ.ಸೂರ್ಯವಂಶಿ ಈ ವರ್ಷದ ಐಪಿಎಲ್‌ನಲ್ಲಿ 8 ಪಂದ್ಯಗಳಲ್ಲಿ ಒಟ್ಟು 357 ರನ್ ಗಳಿಸಿದ್ದು, ಇದರಲ್ಲಿ 31 ಬೌಂಡರಿಗಳು ಹಾಗೂ 32 ಸಿಕ್ಸರ್‌ಗಳಿವೆ.

- Advertisement -

Related news

error: Content is protected !!