Friday, November 6, 2026
spot_imgspot_img
spot_imgspot_img

ಮೈಸೂರು ದಸರಾ ಕಂಬಳದಲ್ಲಿ ಅವಮಾನ: ಜಿಲ್ಲಾ ಕಂಬಳ ಸಮಿತಿ ತೀವ್ರ ಆಕ್ರೋಶ; ಸರಕಾರಿ ಕಂಬಳಗಳಿಗೆ ಸಹಕಾರ ಸ್ಥಗಿತದ ಚಿಂತನೆ

- Advertisement -
- Advertisement -

ಮೂಡುಬಿದಿರೆ: ಮೈಸೂರು ದಸರಾ ಸಂದರ್ಭ ನಡೆದ ಕಂಬಳದಲ್ಲಿ ಯಜಮಾನರು, ತೀರ್ಪುಗಾರರು, ಸಮಿತಿ ಸದಸ್ಯರು, ಹಿರಿಯರಿಗೆ ಪ್ರವೇಶ ವ್ಯವಸ್ಥೆ ಆಗಿಲ್ಲ, ಸೂಕ್ತ ಗೌರವ ಲಭಿಸಿಲ್ಲ. ಪೊಲೀಸರು ಪ್ರವೇಶ ನಿರಾಕರಿಸಿದ್ದಾರೆ ಇತ್ಯಾದಿ ಬೆಳವಣಿಗೆಗಳ ಬಗ್ಗೆ ಮೂಡುಬಿದಿರೆ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಜಿಲ್ಲಾ ಕಂಬಳ ಸಮಿತಿಯ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮುಂದಿನ ದಿನಗಳಲ್ಲಿ ಸರಕಾರದ ಮಟ್ಟದಲ್ಲಿ ನಡೆಯುವ ಕಂಬಳಗಳು ಅಧಿಕಾರಿಗಳ ಕಂಬಳ ಎಂಬಂತಾಗಬಾರದು. ಜಿಲ್ಲಾ ಕಂಬಳ ಸಮಿತಿ ಹಾಗೂ ಅಸೋಸಿಯೇಶನ್‌ನ ನಿಯಮಾವಳಿಯಂತೆ ನಡೆಯಬೇಕು. ಕಂಬಳಕ್ಕೆ ಸಂಬಂಧಪಟ್ಟವರಿಗೆ ಗೌರವ ಸಿಗದಿದ್ದರೆ ಅಂತಹ ಕಂಬಳಗಳಿಗೆ ಸಹಕಾರ ನೀಡದಿರಲು ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ಚಿಂತನೆ ನಡೆಸಲಾಯಿತು.

ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಸನಿಲ್‌ ಅಧ್ಯಕ್ಷತೆ ವಹಿಸಿದ್ದರು. ಕೆಲವು ಗೊಂದಲಗಳನ್ನು ನಿವಾರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕಂಬಳದ ತೀರ್ಪುಗಾರರು ಹಾಗೂ ವೀಕ್ಷಕ ವಿವರಣೆಗಾರರು ಸಮಿತಿಯ ಆಜೀವ ಸದಸ್ಯರಾಗಿರುವುದು ಕಡ್ಡಾಯ. ಸದಸ್ಯತ್ವ ಹೊಂದಿರದವರನ್ನು ಯಾವುದೇ ಕಂಬಳ ಸಮಿತಿಗಳು ಈ ಹುದ್ದೆಗಳಿಗೆ ನಿಯೋಜಿಸಬಾರದು ಎಂದು ನಿರ್ಧರಿಸಲಾಯಿತು. ಕೋಣಗಳ ಯಜಮಾನರೂ ಸದಸ್ಯತ್ವ ಪಡೆಯುವಂತೆ ಮನವಿ ಮಾಡಲಾಯಿತು.

ಸರಕಾರದ ಮಾರ್ಗಸೂಚಿಯಂತೆ 150 ಜತೆ ಕೋಣಗಳು ಭಾಗವಹಿಸುವ ಕಂಬಳವನ್ನು 24 ಗಂಟೆಯೊಳಗೆ ಹಾಗೂ ಅದಕ್ಕಿಂತ ಹೆಚ್ಚು ಜತೆ ಭಾಗವಹಿಸುವ ಕಂಬಳವನ್ನು 30 ಗಂಟೆಯೊಳಗೆ ಪೂರ್ಣಗೊಳಿಸಲು ಅವಕಾಶವಿದೆ. ಕಂಬಳದ ವಿಳಂಬ ತಪ್ಪಿಸಲು ಗಂತಿನಲ್ಲಿ ಕೋಣಗಳನ್ನು ಬಿಡಲು ಗರಿಷ್ಠ 15 ನಿಮಿಷ ನಿಗದಿಪಡಿಸಲಾಯಿತು. ತೀರ್ಪುಗಾರರ ಸಂಭಾವನೆಯನ್ನೂ ಗೊತ್ತುಪಡಿಸಲಾಯಿತು.

ಸಮಿತಿಯ ಮಾಜಿ ಅಧ್ಯಕ್ಷರಾದ ಭಾಸ್ಕರ ಎಸ್. ಕೋಟ್ಯಾನ್, ಪಿ. ಆ‌ರ್. ಶೆಟ್ಟಿ, ಪ್ರಮುಖರಾದ ವಿಜಯಕುಮಾರ್‌ಕಂಗಿನಮನೆ, ಲೋಕೇಶ್ ಶೆಟ್ಟಿ, ಸಂದೀಪ್ ಶೆಟ್ಟಿ, ನಂದಳಿಕೆ ಶ್ರೀಕಾಂತ್ ಭಟ್, ರಶ್ಮಿತ್ ಶೆಟ್ಟಿ, ಗಿರೀಶ್ ಆಳ್ವ, ಅರುಣ್ ಶೆಟ್ಟಿ, ದೇವರಾಜ್ ಹೆಗ್ಡೆ, ಅಶ್ವತ್ಥ ಪಣಪಿಲ ಮತ್ತಿತರರಿದ್ದರು.

- Advertisement -

Related news

error: Content is protected !!