Thursday, June 18, 2026
spot_imgspot_img
spot_imgspot_img

ವಿಟ್ಲ : ರಿಪೇರಿಗಾಗಿ ಮನೆಯಲ್ಲಿ ದಾಸ್ತಾನಿರಿಸಿದ್ದ 16 ಬೋರ್ ವೆಲ್ ಪಂಪ್‌ಗಳು ಕಳವು :ವಿಟ್ಲ ಠಾಣೆಯಲ್ಲಿ ದೂರು ದಾಖಲು

- Advertisement -
- Advertisement -

ವಿಟ್ಲ : ರಿಪೇರಿಗಾಗಿ ಸಾರ್ವಜನಿಕರಿಂದ ಪಡೆದು ಮನೆಯಲ್ಲಿ ದಾಸ್ತಾನಿರಿಸಿದ್ದ 16 ಬೋರ್ ವೆಲ್ ಪಂಪ್ ಗಳನ್ನು ಕಳವುಗೈದ ಘಟನೆ ವಿಟ್ಲ ಸಮೀಪದ ಪುಣಚ ಎಂಬಲ್ಲಿ ಜು 22 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಇಲ್ಲಿನ ನಿವಾಸಿ ಗಣೇಶ ಗೌಡ (49) ಅವರ ಮನೆಯಲ್ಲಿ ಜುಲೈ 21 ರ ರಾತ್ರಿಯಿಂದ 22 ರ ಬೆಳಗ್ಗಿನ ಮಧ್ಯದ ಅವಧಿಯಲ್ಲಿ ಈ ಕಳವು ಕೃತ್ಯ ನಡೆದಿದೆ.
ಇವರು ತನ್ನ ಮನೆಯ ಬಳಿಯಿರುವ ಕಟ್ಟಡದಲ್ಲಿ, ರಿಪೇರಿಗಾಗಿ ಸಾರ್ವಜನಿಕರಿಂದ ಪಡೆದು ಇರಿಸಿದ್ದ ಒಟ್ಟು 16 ಬೋರ್‌ವೆಲ್ ಪಂಪ್ ಗಳು ಕಳ್ಳರ ಪಾಲಾಗಿವೆ. ಕಳವಾಗಿರುವ ಪಂಪ್ ಗಳ ಒಟ್ಟು ಮೌಲ್ಯ 1.81 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 119/2024, ಕಲಂ: 303 (2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!