Monday, June 8, 2026
spot_imgspot_img
spot_imgspot_img

ಕುಂದಾಪುರ: ಚಲಿಸುತ್ತಿದ್ದಾಗಲೇ ಕಳಚಿದ ಸರ್ಕಾರಿ ಬಸ್ಸಿನ ಟಯರ್; ತಪ್ಪಿದ ಭಾರೀ ಅನಾಹುತ

- Advertisement -
- Advertisement -

ಕುಂದಾಪುರ,: ಚಲಿಸುತ್ತಿದ್ದಾಗಲೇ ಸರ್ಕಾರಿ ಬಸ್ಸಿನ ಟಯರ್ ಕಳಚಿದ್ದು, ಸಂಭವನೀಯ ಅನಾಹುತ ತಪ್ಪಿದ ಘಟನೆ ಕುಂದಾಪುರ ಆಜ್ರಿ ಸಮೀಪದ ಹೆಮ್ಮಕ್ಕಿ ಬಳಿ ಶನಿವಾರ ನಡೆದಿದೆ.

ಆಜ್ರಿಯಿಂದ ಕುಂದಾಪುರಕ್ಕೆ ಸಂಚರಿಸುವ ಸರ್ಕಾರಿ ಬಸ್ ಇದಾಗಿದೆ. ಬಸ್ ನಿಧಾನಗತಿಯಲ್ಲಿ ಸಂಚರಿಸುತ್ತಿದ್ದರಿಂದ ಯಾವುದೇ ಅನಾಹುತ ಸಂಭವಿಸದೆ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಆಜ್ರಿಯ ನಿವಾಸಿ ಚಂದ್ರಹಾಸ ಅವರು ಪ್ರತಿಕ್ರಿಯೆ ನೀಡಿದ್ದು, ಕೆಎಸ್‌ಆರ್‌ಟಿಸಿ ಹಾಗೂ ಡಿಪೋ ಮೆಕ್ಯಾನಿಕ್‌ಗಳ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟ ಆಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!