Monday, June 22, 2026
spot_imgspot_img
spot_imgspot_img

ವಿಧಾನ ಪರಿಷತ್ ಸದಸ್ಯರಾಗಿ 17ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ..!

- Advertisement -
- Advertisement -

ಬೆಂಗಳೂರು: ವಿಧಾನಸಭೆ ಮತ್ತು ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್‌ ನೂತನವಾಗಿ ಆಯ್ಕೆಯಾದ ಒಟ್ಟು 17 ಸದಸ್ಯರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನ ಪರಿಷತ್‌ ವಿಧಾನಸಭೆಯಿಂದ ಆಯ್ಕೆಯಾದ ಐವನ್ ಡಿಸೋ ಜ, ಕೆ. ಗೋವಿಂದರಾಜ್, ಜಗದೇವ ಗುತ್ತೇ ದಾರ್, ಬಿಲ್ಲೀ ಸ್ ಬಾನು, ಎನ್.ಎಸ್. ಬೋಸರಾಜು, ಡಾ.ಯತೀಂದ್ರ ಸಿದ್ದರಾಮಯ್ಯ, ಎ. ವಸಂತ ಕುಮಾರ,ಮೂಳೆಮಾರುತಿರಾವ್, ಟಿ.ಎನ್. ಜವರಾಯಿ ಗೌಡ, ಸಿ.ಟಿ. ರವಿ ಮತ್ತು ಎನ್.ರವಿಕುಮಾರ್ ಹಾಗೂ ಪದವೀಧರರ ಮತ್ತು ಶಿಕ್ಷಕರ ಕ್ಷೇ ತ್ರದಿಂದ ಆಯ್ಕೆಯಾದ ಚಂದ್ರಶೇಖರ ಪಾಟೀಲ ಬಸವರಾಜ, ಡಾ. ಧನಂಜಯ್ ಸರ್ಜಿ , ರಾಮೋಜಿಗೌಡ, ಎಸ್.ಎಲ್. ಬೋಜೇಗೌಡ,ಕೆ. ವಿವೇಕಾನಂದ ಹಾಗೂ ಡಿ.ಟಿ.ಶ್ರೀನಿವಾಸ ಅವರು ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಪ್ರಮಾಣ ವಚನ ಸ್ವೀ ಕಾರ ಸಮಾರಂಭದಲ್ಲಿ ಮುಖ್ಯಮಂ ತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಮತ್ತು ಸಂಸದೀ ಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಉಪಸ್ಥಿತರಿದ್ದರು.

- Advertisement -

Related news

error: Content is protected !!