Monday, April 29, 2024
spot_imgspot_img
spot_imgspot_img

ಮಗಳ ಮದುವೆಗೆಂದು ಬ್ಯಾಂಕ್ ಲಾಕರ್​ನಲ್ಲಿಟ್ಟಿದ್ದ 18 ಲಕ್ಷ ರೂ. ಗೆದ್ದಲ ಪಾಲು

- Advertisement -G L Acharya panikkar
- Advertisement -

ಮಗಳ ಮದುವೆಗೆಂದು ಮಹಿಳೆಯೊಬ್ಬರು ಬ್ಯಾಂಕ್ ಲಾಕರ್​ನಲ್ಲಿಟ್ಟಿದ್ದ 18 ಲಕ್ಷ ರೂಪಾಯಿಗಳನ್ನು ಗೆದ್ದಲು ಹುಳುಗಳು ತಿಂದ ಘಟನೆ ಉತ್ತರಪ್ರದೇಶದ ಮೊರದಾಬಾದ್‍ನಲ್ಲಿ ನಡೆದಿದೆ.

ಅಲ್ಕಾ ಪಾಠಕ್ ಮಹಿಳೆ ಸುಮಾರು ಒಂದು ವರ್ಷಗಳ ಹಿಂದೆ ಹಣ ಮತ್ತು ಆಭರಣಗಳನ್ನು ಲಾಕರ್​ನಲ್ಲಿಟ್ಟಿದ್ದರು. ಅವರು ತಮ್ಮ ಮಗಳ ಮದುವೆ ಖರ್ಚಿಗೆ ಬೇಕಾಗುತ್ತದೆ ಎಂದು ಉಳಿತಾಯ ಮಾಡಿ ಅಕ್ಟೋಬರ್​ 2022ರಲ್ಲಿ 18 ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದರು. ಆದರೆ ಈಗ ನೋಟುಗಳೆನ್ನೆಲ್ಲಾ ಗೆದ್ದಲು ತಿಂದು ಮಣ್ಣಾಗಿರುವುದನ್ನು ನೋಡಿ ಮಹಿಳೆಗೆ ಆಘಾತವಾಗಿದೆ.

ಬ್ಯಾಂಕ್ ಸಿಬ್ಬಂದಿ ಅಲ್ಕಾ ಅವರಿಗೆ ಕರೆ ಮಾಡಿ ಲಾಕರ್​ನ ವಾರ್ಷಿಕ ನಿರ್ವಹಣೆ ಮತ್ತು ಕೆವೈಸಿ ಅಪ್​ಡೇಟ್​ಗಾಗಿ ಕರೆಸಿಕೊಂಡಿತ್ತು, ಈ ವೇಳೆ ಸಂದರ್ಭದಲ್ಲಿ ಹಣವೆಲ್ಲಾ ಗೆದ್ದಲು ಪಾಲಾಗಿರುವುದು ಬೆಳಕಿಗೆ ಬಂದಿದೆ. ಬ್ಯಾಂಕಿಗೆ ಬಂದು ಲಾಕರ್ ತೆರೆದ ಮಹಿಳೆ ಗೆದ್ದಲು ತಿಂದ ನೋಟುಗಳನ್ನು ನೋಡಿ ಅಘಾತಕಗಕೊಳಗಾಗಿದ್ದಾರೆ. ತಕ್ಷಣ ಈ ವಿಚಾರವನ್ನು ಅವರು ಬ್ಯಾಂಕ್​ ಮ್ಯಾನೇಜರ್​ಗೆ ತಿಳಿಸಿದ್ದಾರೆ.

ಅಲ್ಕಾ ಪಾಠಕ್ ಸಣ್ಣ ಬ್ಯುಸಿನೆಸ್ ಜೊತೆಗೆ ಟ್ಯೂಶನ್ ಮಾಡುತ್ತಾ ಸಂಪಾದಿಸಿ ಉಳಿಸಿದ ಹಣವನ್ನು ಮತ್ತು ಆಭರಣಗಳನ್ನು ಲಾಕರ್​ನಲ್ಲಿ ಇಟ್ಟಿದ್ದರು. ಲಾಕರ್ ಸುರಕ್ಷತೆಗೆ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಗೆದ್ದಲು ಹುಳುಗಳು ಅಂಟಿಕೊಂಡಿವೆ ಎಂದು ಬ್ಯಾಂಕ್ ಅಕಾರಿಗಳು ತಿಳಿಸಿದ್ದಾರೆ. ಈ ಕುರಿತು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ತನಿಖೆಗೆ ಆದೇಶಿಸಿದ್ದು, ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುವ ಆಶ್ವಾಸನೆಯನ್ನು ನೀಡಿದ್ದಾರೆ.

- Advertisement -

Related news

error: Content is protected !!