Sunday, June 29, 2025
spot_imgspot_img
spot_imgspot_img

2 ವರ್ಷಗಳ ಹಿಂದೆ ಖರೀದಿಸಿದ ಟಗರು ಮಾರಾಟವಾಗಿದ್ದು ಎಷ್ಟು ಬೆಲೆಗೆ ಗೊತ್ತಾ..?

- Advertisement -
- Advertisement -

ಮಂಡ್ಯ: ಇಲ್ಲೊಂದು ಟಗರಿಗೆ ಚಿನ್ನಕ್ಕಿಂತ ಹೆಚ್ಚು ಡಿಮ್ಯಾಂಡು. ಈ ಹಿಂದೆಯೂ ಇಂತಹದ್ದೇ ಆಡು, ಮೇಕೆ, ಎಮ್ಮೆಗಳು ಅತ್ಯಧಿಕ ಬೆಲೆಯಲ್ಲಿ ಮಾರಾಟವಾಗಿದ್ದು ಗೊತ್ತೇ ಇದೆ. ಈಗ ಮಂಡ್ಯದಲ್ಲೊ0ದು ಟಗರು ದಾಖಲೆ ಬೆಲೆಯಲ್ಲಿ ಮಾರಾಟವಾಗಿದೆ. ಅಷ್ಟಕ್ಕೂ ಆ ಟಗರು ಮಾರಾಟವಾಗಿದ್ದು ಎಷ್ಟು ಬೆಲೆಗೆ ಅಂತೀರಾ ಮುಂದೆ ಓದಿ….

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿಪುರ ಗ್ರಾಮದ ಸಣ್ಣಪ್ಪ ಎಂಬುವರು 2 ವರ್ಷದ ಹಿಂದೆ ಬಂಡೂರು ಟಗರೊಂದನ್ನು 1 ಲಕ್ಷದ 5 ಸಾವಿರಕ್ಕೆ ಖರೀದಿಸಿ ತಂದಿದ್ದರು. ಇಂತಹ ಟಗರನ್ನು ಇಂದು ಮಾರಾಟಕ್ಕೆ ಇಟ್ಟಿದ್ದರು. ಇದನ್ನು ಬಿದರಕೋಟೆಯ ಕೃಷ್ಣಪ್ಪ ಎಂಬುವರ 1 ಲಕ್ಷದ 91 ಸಾವಿರ ರೂಪಾಯಿಗೆ ಖರೀದಿಸಿದ್ದಾರೆ. ಈ ಮೂಲಕ ಟಗರು ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ.

ಅಂದಹಾಗೇ 1.91 ಲಕ್ಷಕ್ಕೆ ಟಗರು ಖರೀದಿಸಿದಂತ ಬಿದರಕೋಟೆ ಕೃಷ್ಣಪ್ಪ ಎಂಬುವರು, ಟಗರಿಗೆ ಹೂವಿನಹಾರವನ್ನು ಹಾಕಿ, ದೇವಿಪುರ ಸೇರಿದಂತೆ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಟಗರಿನ ಮೆರವಣಿಗೆ ನಡೆಸಿದರು. ಲಕ್ಷಕ್ಕಗಟ್ಟಲೆ ಮಾರಾಟಗೊಂಡ ಟಗರನ್ನು ನೋಡಲು ನೂರಾರು ಸಂಖ್ಯೆಯ ಗ್ರಾಮಸ್ಥರ ದಂಡೇ ನೆರೆದಿತ್ತು.

- Advertisement -

Related news

error: Content is protected !!