Tuesday, April 23, 2024
spot_imgspot_img
spot_imgspot_img

2000 ರೂ. ಮುಖಬೆಲೆ ನೋಟು ಹೆಚ್ಚಾಗಿ ಕೈಗೆ ಸಿಗುತ್ತಿಲ್ಲವೇಕೆ ಗೊತ್ತಾ..?

- Advertisement -G L Acharya panikkar
- Advertisement -

ನವದೆಹಲಿ: 2016ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಳೆಯ 500ರೂ. ಮುಖಬೆಲೆಯ ನೋಟು ಹಾಗೂ 1ಸಾವಿರ ರೂ.ಮುಖಬೆಲೆ ನೋಟುಗಳನ್ನು ರದ್ದು ಮಾಡಿದ ಬಳಿಕ ಹೊಸ ನೋಟುಗಳನ್ನು ಪರಿಚಯಿಸಿದ್ದರು. ಅದ್ರಲ್ಲಿ 2000ರೂ.ಮುಖಬೆಲೆಯ ನೋಟುಗಳು ಒಂದಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ 2 ಸಾವಿರ ರೂ.ಮುಖಬೆಲೆಯ ನೋಟುಗಳು ಅಷ್ಟಾಗಿ ಕೈಗೆ ಸಿಗುತ್ತಿಲ್ಲ. ಅದಕ್ಕೆ ಕಾರಣ ಕಳೆದ ವರ್ಷಂದೀಚೆಗೆ ಒಂದೇ ಒಂದು 2,000 ಮುಖಬೆಲೆ ನೋಟು ಮುದ್ರಣವಾಗಿಲ್ಲ ಆರ್ ಬಿಐ ವರದಿ ತಿಳಿಸಿದೆ.

ರಿಸರ್ವ್ ಬ್ಯಾಂಕ್ ಇಂಡಿಯಾ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯ ಪ್ರಕಾರ, 2019-20ನೇ ಸಾಲಿನಲ್ಲಿ 2000ರೂ.ಮುಖಬೆಲೆಯ ನೋಟುಗಳನ್ನೇ ಮುದ್ರಣ ಮಾಡಿಲ್ಲವಂತೆ. ಇದಲ್ಲದೇ, 2000ರೂ.ಮುಖಬೆಲೆಯ ನೋಟುಗಳು ಚಾಲ್ತಿಯಲ್ಲಿರುವುದು ಬಹಳಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಮಾರ್ಚ್ ನಲ್ಲಿ 32,910 ಲಕ್ಷ 2 ಸಾವಿರ ರೂ.ಮುಖಬೆಲೆಯ ನೋಟುಗಳು ಚಾಲ್ತಿಯಲ್ಲಿದ್ದವು. ಆದರೆ 2020ರ ಮಾರ್ಚ್ ನಲ್ಲಿ 27,398 ಲಕ್ಷ ನೋಟುಗಳು ಚಾಲ್ಲಿಯಲ್ಲಿವೆತ್ತು. ಆದರೆ 2019-20ರಲ್ಲಿ 2 ಸಾವಿರ ರೂ.ನೋಟುಗಳ ಮುದ್ರಣಕ್ಕೆ ಆದೇಶ ಬಂದಿಲ್ಲ ಎಂದು ವರದಿ ತಿಳಿಸಿದೆ.

- Advertisement -

Related news

error: Content is protected !!