Friday, April 26, 2024
spot_imgspot_img
spot_imgspot_img

2021ರಲ್ಲಿ ಶೇ.11.5ರಷ್ಟು​ ಪ್ರಗತಿ ಸಾಧಿಸಬಲ್ಲ ಏಕೈಕ ದೇಶ ಭಾರತ! – ಐ.ಎಮ್.ಎಫ್

- Advertisement -G L Acharya panikkar
- Advertisement -

ನವದೆಹಲಿ: ಭಾರತ 2021ರಲ್ಲಿ ಶೇಕಡ 11.5ರಷ್ಟು​ ಪ್ರಗತಿ ಸಾಧಿಸುವ ಮೂಲಕ ಜಗತ್ತಿನಲ್ಲೇ ಎರಡಂಕಿಯ ಆರ್ಥಿಕತೆ ಪ್ರಗತಿ ಹೊಂದಿದ ದೇಶವಾಗಿ ಹೊರಹೊಮ್ಮಲಿದೆ ಎಂದು ಇಂಟರ್​ನ್ಯಾಷನಲ್ ಮಾನಿಟರಿ ಫಂಡ್ಸ್(IMF) ಅಂದಾಜಿಸಿದೆ.

ನಂತರದ ಸ್ಥಾನದಲ್ಲಿ ಚೀನಾ ಇರಲಿದ್ದು ಅದು 8.1 ಪರ್ಸೆಂಟ್ ಪ್ರಗತಿ ಸಾಧಿಸಲಿದೆ. ಸ್ಪೇನ್ 5.9, ಫ್ರಾನ್ಸ್ 5.5 ಪರ್ಸೆಂಟ್ ಪ್ರಗತಿ ಸಾಧಿಸುವ ಮೂಲಕ ನಂತರದ ಸ್ಥಾನದಲ್ಲಿ ಇರಲಿವೆ ಎಂದಿದೆ. ಇನ್ನು 2020ರಲ್ಲಿ ಭಾರತ 8 ಪರ್ಸೆಂಟ್ ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಚೀನಾ ಮಾತ್ರ 2.3 ಪರ್ಸೆಂಟ್ ಧನಾತ್ಮಕ ಪ್ರಗತಿ ಹೊಂದಿದೆ ಎಂದು ಐಎಮ್​ಎಫ್ ಹೇಳಿದೆ.

ಮುಂದುವರೆದು 2022ರಲ್ಲಿ ಭಾರತ 6.8 ರಷ್ಟು ಪ್ರಗತಿ ಹೊಂದಲಿದೆ, ಚೀನಾ 5.6 ಪರ್ಸೆಂಟ್ ಪ್ರಗತಿ ಹೊಂದುವ ಸಾಧ್ಯತೆಗಳಿವೆ ಎಂದು ಐಎಮ್​ಎಫ್ ಅಂದಾಜಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಐಎಮ್​ಎಫ್​ನ ಎಮ್​.ಡಿ. ಕ್ರಿಸ್ಟಲಿನ ಜಿಯೋರ್ಜಿವ, ಭಾರತ ಕೊರೊನಾ ಸೋಂಕಿನ ಸಮಯದಲ್ಲಿ ತನ್ನ ಆರ್ಥಿಕ ಪ್ರಗತಿಯನ್ನು ಕಾಪಾಡಿಕೊಳ್ಳಲು ಪ್ರಬುದ್ಧ ನಿರ್ಧಾರಗಳನ್ನು ತೆಗೆದುಕೊಂಡಿದೆ. ಬೆಳೆಯುತ್ತಿರುವ ಮಾರ್ಕೆಟ್​ಗಳು ಶೇಕಡ 6 ರಷ್ಟು ಜಿಡಿಪಿಯನ್ನು ನೀಡಿವೆ. ಆದರೆ ಭಾರತದಲ್ಲಿ ಇದು ಸ್ವಲ್ಪ ಹೆಚ್ಚೇ ಇದೆ. ಭಾರತದ ಪಾಲಿಗೆ ಇದು ಒಳ್ಳೆಯದು ಎಂದಿದ್ದಾರೆ.

- Advertisement -

Related news

error: Content is protected !!