Tuesday, July 28, 2026
spot_imgspot_img
spot_imgspot_img

ಇರಾಕ್‌ನಲ್ಲಿರುವ ಅಮೆರಿಕದ ದೂತವಾಸ ಕಚೇರಿ ಬಳಿ ಇರಾನ್‌ ಡ್ರೋನ್‌ ದಾಳಿ

- Advertisement -
- Advertisement -

ಟೆಹ್ರಾನ್‌: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಮಂಗಳವಾರ ಉತ್ತರ ಇರಾಕ್‌ನ ಎರ್ಬಿಲ್‌ನಲ್ಲಿ (ಇರಾಕಿ ಕುರ್ದಿಸ್ತಾನ್‌ನ ರಾಜಧಾನಿ) ಹಲವಾರು ಸ್ಫೋಟಗಳು ಸಂಭವಿಸಿವೆ.

ಅಮೆರಿಕದ ದೂತವಾಸ ಕಚೇರಿ ಸಮೀಪದಲ್ಲಿಯೂ ಸ್ಫೋಟದ ಶಬ್ಧಗಳು ಕೇಳಿಬಂದಿದ್ದು, ಇರಾನ್‌ ಹಲವು ಡ್ರೋನ್‌ಗಳ ಮೂಲಕ ಉತ್ತರ ಇರಾಕ್‌ನ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ಸ್ಥಳೀಯ ಅಧಿಕಾರಿ ಮೂಲಗಳ ಪ್ರಕಾರ, ಕನಿಷ್ಠ ನಾಲ್ಕು ಇರಾನಿನ ಡ್ರೋನ್‌ಗಳು ಉತ್ತರ ಇರಾಕ್‌ನ ಖಲೀಫನ್ ಮತ್ತು ಸೊರಾನ್ ಪ್ರದೇಶಗಳಲ್ಲಿನ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಈ ದಾಳಿ ಬಳಿಕ ಆ ಪ್ರದೇಶಗಳಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿವೆ. ಅದರಲ್ಲೂ 2 ಡ್ರೋನ್‌ಗಳು ನಿರ್ದಿಷ್ಟ ಗುರಿ ಸಮೀಪದಲ್ಲೇ ಪತನಗೊಂಡಿದೆ. ಅಲ್ಲದೇ ಎರ್ಬಿಲ್‌ ಪ್ರದೇಶದಲ್ಲಿ ಕನಿಷ್ಠ 7 ಬಾರಿ ಸ್ಫೋಟದ ಶಬ್ಧಗಳು ಕೇಳಿಬಂದಿವೆ.

ಇರಾನ್‌, ಇರಾಕ್‌ನಲ್ಲಿರೋ ಅಮೆರಿಕ ದೂತವಾಸ ಕಚೇರಿ ಸಮೀಪ ಡ್ರೋನ್‌ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕ ಗಸ್ತು ಆರಂಭಿಸಿದೆ. ಎರ್ಬಿಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ 10ಕ್ಕೂ ಹೆಚ್ಚು ಯುದ್ಧ ವಿಮಾನಗಳು ಹಾಗೂ ಡ್ರೋನ್‌ಗಳು ಗಸ್ತು ನಡೆಸುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದೇ ವೇಳೆ ಇರಾನ್‌ನ ಸರ್ಕಾರಿ ಮಾಧ್ಯಮ, ಅಲ್ ಅನ್ಬಾರ್ ಪ್ರಾಂತ್ಯದಲ್ಲಿ ಅಮೆರಿಕದ 1 ಡ್ರೋನ್ ಹೊಡೆದುರುಳಿಸಲಾಗಿದೆ ಎಂದು ಹೇಳಿಕೊಂಡಿದ್ದು, ಸ್ಥಳೀಯ ಮಾಧ್ಯಮಗಳು ಹದೀಥಾ ಅಣೆಕಟ್ಟು ಸಮೀಪ ಅಮೆರಿಕದ ಡ್ರೋನ್ ಪತನಗೊಂಡಿರುವ ಚಿತ್ರಗಳನ್ನು ಪ್ರಕಟಿಸಿವೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!