Tuesday, July 7, 2026
spot_imgspot_img
spot_imgspot_img

‘ಹಿಂದೂ ಮಹಿಳೆಯರನ್ನೇ ಮದುವೆಯಾಗುತ್ತಾರೆ, ಮತಾಂತರ ಯಾಕಿಲ್ಲ?’ -ಆಮೀರ್ ಖಾನ್‌ಗೆ ನಾಜಿಯಾ ಇಲಾಹಿ ಖಾನ್ ಪ್ರಶ್ನೆ

- Advertisement -
- Advertisement -

ಮುಂಬೈ: ಬಾಲಿವುಡ್ ನಟ ಆಮೀರ್ ಖಾನ್ ಅವರ ವೈಯಕ್ತಿಕ ಜೀವನ ಮತ್ತು ಇತ್ತೀಚಿನ ವೈವಾಹಿಕ ಸಂಬಂಧದ ಬಗ್ಗೆ ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್ ನೀಡಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ.

ಆಮೀರ್ ಖಾನ್ ಅವರ ಹಿಂದಿನ ವಿವಾಹಗಳನ್ನು ಉಲ್ಲೇಖಿಸಿರುವ ನಾಜಿಯಾ ಇಲಾಹಿ ಖಾನ್, ಅವರ ಮೂವರು ಪತ್ನಿಯರೂ ಹಿಂದೂ ಸಮುದಾಯದವರೇ ಆಗಿರುವುದನ್ನು ಪ್ರಶ್ನಿಸಿದ್ದಾರೆ. ಹಿಂದೂ ಮಹಿಳೆಯರನ್ನು ಮದುವೆಯಾಗಲು ಇಚ್ಛಿಸುವ ಆಮೀರ್ ಖಾನ್, ಹಿಂದೂ ಧರ್ಮಕ್ಕೆ ಮತಾಂತರವಾಗದಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಇದೇ ವೇಳೆ, ಹಿಂದೂ ಮಹಿಳೆಯರನ್ನು ಉದ್ದೇಶಪೂರ್ವಕವಾಗಿ ಮದುವೆಯಾಗಿ, ಮಕ್ಕಳಾದ ಬಳಿಕ ವಿಚ್ಛೇದನ ನೀಡುತ್ತಿದ್ದಾರೆ ಎಂದು ನಾಜಿಯಾ ಇಲಾಹಿ ಖಾನ್ ಆರೋಪಿಸಿದ್ದಾರೆ. ಅವರ ಈ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿವೆ.ಆಮೀರ್ ಖಾನ್ ಹಾಗೂ ಗೌರಿ ಸ್ಪ್ರಾಟ್ ಅವರ ಸಂಬಂಧದ ಕುರಿತ ಸುದ್ದಿಗಳು ಈಗಾಗಲೇ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ನಾಜಿಯಾ ಇಲಾಹಿ ಖಾನ್ ಅವರ ಹೇಳಿಕೆಗಳು ಮತ್ತಷ್ಟು ಗಮನ ಸೆಳೆದಿವೆ.ಸೂಚನೆ: ಈ ಆರೋಪಗಳು ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್ ಅವರ ಹೇಳಿಕೆಗಳಾಗಿದ್ದು, ಅವುಗಳಿಗೆ ಸಂಬಂಧಿಸಿದಂತೆ ಆಮೀರ್ ಖಾನ್ ಅವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಪ್ರಕಟವಾಗಿಲ್ಲ.

- Advertisement -

Related news

error: Content is protected !!