


ಪುತ್ತೂರು: ಕಳೆದ 23 ವರ್ಷಗಳಿಂದ ತುಳು ರಂಗಭೂಮಿಯಲ್ಲಿ ಕಲಾಸೇವೆ ಮಾಡುತ್ತಿರುವ ಸಂಸಾರ ಕಲಾವಿದೆರ್ ಬಲ್ನಾಡು, ಪುತ್ತೂರು ಇವರು ಅಭಿನಯಿಸುವ ಈ ವರ್ಷದ ಹೊಸ ನಾಟಕ “ಎಡ್ಡೆ ಆವೊಡು” ಇದರ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಕಾಳಿಕಾಂಬ ಅಂಜನೇಯ ದೇವಸ್ಥಾನ ಶ್ರೀ ಕ್ಷೇತ್ರ ಕುಕ್ಕಾಜೆ ಮಾಣಿಲದಲ್ಲಿ ನಡೆಯಿತು.
ಶ್ರೀ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿಯವರು ವಿಶೇಷ ಪೂಜೆ ನೆರವೇರಿಸಿ, ನೂತನ ನಾಟಕದ ಶೀರ್ಷಿಕೆ ಬಿಡುಗಡೆಗೊಳಿಸಿ ಈ ನಾಟಕವು ಉತ್ತಮ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿ ರಂಗಭೂಮಿಯಲ್ಲಿ ಒಂದು ದಾಖಲೆ ನಿರ್ಮಿಸಲಿ ಎಂದು ಆಶೀರ್ವದಿಸಿದರು.

ತಂಡದ ನಿರ್ದೇಶಕ ನಾಗೇಶ್ ಬಲ್ನಾಡು, ತಂಡದ ಯಜಮಾನ ಕೆ.ಟಿ. ಆನಂದ ವಿಟ್ಲ, ಸಂಚಾಲಕ ಬಾಲಕೃಷ್ಣ ಗೌಡ ಅನುಗ್ರಹ ಪೊರ್ಲು, ಮತ್ತು ಕಲಾವಿದರುಗಳಾದ ಡಿ. ಕೆ. ಶ್ರೀಧರ ಪೂಜಾರಿ ಕಲ್ಲೇಗ, ಕಾಮಿಡಿ ಕಿಲಾಡಿ ಖ್ಯಾತಿಯ ವೈರಲ್ ಸ್ಟಾರ್ ಗಣರಾಜ್ ಭಂಡಾರಿ ಬನ್ನೂರು, ಗಂಗಾಧರ ನಾಯ್ಕ ಕಾಪು, ಪ್ರಜ್ವಲ್ ಕೆರೆಮಾರು, ರವಿಕಲಾ ಸಿಂಹವನ, ಮೋಕ್ಷಿತ್ ಸಿಂಹವನ, ಕು.ರಮ್ಯ ಕು.ಚೈತನ್ಯ ಪುತ್ತೂರು, ಹರೀಶ್ ಶೆಟ್ಟಿ ಗೋಳಿತೊಟ್ಟು ಕು.ಸುನಿತಾ ವಿಟ್ಲ, ಮತ್ತು ಜೆ. ಪಿ. ಲೈಟ್ಸ್ ಸೌಂಡ್ ನ ಜೆ. ಪಿ. ಕುಡ್ತಮುಗೇರು ಉಪಸ್ಥಿತರಿದ್ದರು.

ತಂಡದ ಸಮಗ್ರ ನಿರ್ವಹಣೆ ಮಾಡುತ್ತಿರುವ ಕಲಾರತ್ನ ಬಿ. ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು ಸ್ವಾಗತಿಸಿ, ವಂದಿಸಿದರು. ನಾಗೇಶ್ ಬಲ್ಲಾಡು ಇವರ ಕಥೆಗೆ ರಂಗಚಾಣಕ್ಯ ರಾಘವೇಂದ್ರ ಕಾರಂತ್ ಮೊಗರ್ನಾಡು ಇವರು ಸಾಹಿತ್ಯ ಸಂಭಾಷಣೆ ಬರೆದಿದ್ದಾರೆ. ಎಡ್ಡೆ ಆವೋಡು ಉತ್ತಮ ಸಂದೇಶಭರಿತ ನಾಟಕವಾಗಿದ್ದು ಕಲಾಭಿಮಾನಿಗಳ ಸಹಕಾರ ಯಾಚಿಸಿ ಶೀಘ್ರದಲ್ಲಿ ರಂಗಾರ್ಪಣೆಗೊಳ್ಳಲಿದೆ.
ನಾಟಕದ ಬುಕ್ಕಿಂಗ್ ಗಾಗಿ ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ. 9980389016, 9449768137 ಎಂದು ಕೆ. ಟಿ. ಆನಂದ ಪೂಜಾರಿ ವಿಟ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.








