Monday, May 6, 2024
spot_imgspot_img
spot_imgspot_img

25 ಸಾವಿರದಿಂದ 30 ಸಾವಿರ ಅಂತರದಿಂದ ಜಯಭೇರಿ ಬಾರಿಸ್ತೇವೆ; ವಿಜಯೋತ್ಸವ ಸಂದರ್ಭ ಬೇರೆ ಪಕ್ಷದವರ ಮನೆಯ ಹತ್ತಿರ,ಕಂಪೌಂಡ್ ಸಮೀಪ ಪಟಾಕಿ ಹೊಡೆಯಬೇಡಿ- ಅಶೋಕ್‌ ಕುಮಾರ್‌ ರೈ

- Advertisement -G L Acharya panikkar
- Advertisement -

ಪುತ್ತೂರು: ವಿಧಾನಸಭಾ ಚುನಾವಣೆಗೆ ಮತದಾನ ನಿನ್ನೆಯಷ್ಟೇ ಮುಕ್ತಾಯಗೊಂಡಿದೆ. ಹೈವೋಲ್ವೇಜ್ ಕಣವಾಗಿ ಮಾರ್ಪಟ್ಟಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಉತ್ತಮ ಮತದಾನವಾಗಿದೆ. ಕ್ಷೇತ್ರದ ಜನರು ಮತ್ತು ವಿವಿಧ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ಹಾಗೂ ಪಕ್ಷೇತರ ಅಭ್ಯರ್ಥಿ ಹಾಗೂ ಅವರ ಹಿಂಬಾಲಕರೂ ಸಹ ಗೆಲುವಿನ ಲೆಕ್ಕಾಚಾರ ಮತ್ತು ಕಾತರದಲ್ಲಿದ್ದಾರೆ.

ಈ ನಡುವೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ವಿಡಿಯೋವೊಂದನ್ನು ರಿಲೀಸ್ ಮಾಡಿದ್ದು ಅದರಲ್ಲಿ ಅವರು ಮತದಾರರಿಗೆ ಕೃತಜ್ಞತೆ ಅರ್ಪಿಸುವ ಜೊತೆಗೆ ಗೆಲುವು ತಮ್ಮದೇ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

“ಒಳ್ಳೆಯ ರೀತಿಯಲ್ಲಿ ಚುನಾವಣೆ ನಡೆದಿದೆ, ಅಲೆ ನಮ್ಮ ಪರವಾಗಿದ್ದು ನಾವು ಸುಮಾರು 25 ಸಾವಿರದಿಂದ 30 ಸಾವಿರ ಅಂತರದಿಂದ ಜಯಭೇರಿ ಬಾರಿಸ್ತೇವೆ. ನಮ್ಮ ಕಾರ್ಯಕರ್ತರಿಗೆ ನನ್ನದೊಂದು ಮನವಿ ಇದೆ. ಯಾರೂ ಕೂಡಾ ವಿಜಯೋತ್ಸವ ಸಂದರ್ಭದಲ್ಲಿ ಬೇರೆ ಪಕ್ಷದವರ ಮನೆಯ ಹತ್ತಿರ ಅವರ ಮನೆಗಳ ಕಾಂಪೌಡ್ ಸಮೀಪ ಪಟಾಕಿ ಹೊಡೆಯುವ ಕೆಲಸ ಮಾಡಬಾರದು. ಅದೇ ರೀತಿ ಅನ್ಯಪಕ್ಷದವರನ್ನು ನಿಂದಿಸುವ ಅಥವಾ ಅವರಿಗೆ ನೋವು ಉಂಟು ಮಾಡುವ ರೀತಿಯಲ್ಲಿ ಯಾರೂ ವರ್ತಿಸಬಾರದು. ಹಿಂದೆ ಏನೇ ಆಗಿರಬಹುದು ಆದರೆ ಈ ಬಾರಿ ಇಂತಹ ಯಾವುದೇ ವರ್ತನೆಗೆ ನೀವು ಅವಕಾಶ ಮಾಡಿಕೊಡಬಾರದು” ಎಂದು ಅಶೋಕ್ ಕುಮಾರ್ ರೈ ಹೇಳುವ ಮೂಲಕ ಪುತ್ತೂರು ಕ್ಷೇತ್ರದಲ್ಲಿ ಸೌಹಾರ್ದ ರಾಜಕೀಯ ವಾತಾವರಣವನ್ನು ನಿರ್ಮಿಸಿ ಅದನ್ನು ಮುಂದುವರಿಸಿಕೊಂಡು ಹೋಗುವ ಭರವಸೆಯನ್ನು ಮೂಡಿಸಿದ್ದಾರೆ.

- Advertisement -

Related news

error: Content is protected !!