Monday, April 29, 2024
spot_imgspot_img
spot_imgspot_img

ವಿಟ್ಲ: (ಸೆ.19-20) ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ರಿ.)ಗಣೇಶನಗರ-ಮಿತ್ತನಡ್ಕ , ಹಿಂದೂ ಜಾಗರಣ ವೇದಿಕೆ ಕರೋಪಾಡಿ ಸಹಭಾಗಿತ್ವದಲ್ಲಿ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಬೆಳ್ಳಿಹಬ್ಬ ಮಹೋತ್ಸವ

- Advertisement -G L Acharya panikkar
- Advertisement -

ವಿಟ್ಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ರಿ.) ಗಣೇಶನಗರ-ಮಿತ್ತನಡ್ಕ, ಕರೋಪಾಡಿ ಮತ್ತು ಹಿಂದೂ ಜಾಗರಣ ವೇದಿಕೆ ಕರೋಪಾಡಿ ಸಹಭಾಗಿತ್ವದಲ್ಲಿ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಬೆಳ್ಳಿಹಬ್ಬ ಮಹೋತ್ಸವವು ಸೆ.19 ಮತ್ತು ಸೆ.20 ರಂದು ನಡೆಯಲಿದೆ.

ಸೆ.19ರಂದು ಪೂಜಾ ಹೋಮಾದಿ ಕಾರ್ಯಕ್ರಮವು ವೇ.ಮೂ.ಪರಕ್ಕಜೆ ಗಣಪತಿ ಭಟ್ ಇವರ ನೇತೃತ್ವದಲ್ಲಿ ನಡೆಯಲಿದೆ. ಬೆಳಿಗ್ಗೆ ಗಂಟೆ 8ಕ್ಕೆ ಗಣಪತಿ ಪ್ರತಿಷ್ಠೆ , ಬೆಳಿಗ್ಗೆ ಗಂಟೆ 9ಕ್ಕೆ 12 ತೆಂಗಿನಕಾಯಿ ಗಣಪತಿ ಹೋಮ, ಬೆಳಿಗ್ಗೆ ಗಂಟೆ 10.30ಕ್ಕೆ ಪೂರ್ಣಾಹುತಿ, ಬೆಳಿಗ್ಗೆ ಗಂಟೆ 11ರಿಂದ ಕಲ್ಪೋಕ್ತ ಪೂಜೆ, ಸಹಸ್ರನಾಮ ಅಷ್ಟೋತ್ತರ, ಶ್ರೀರಾಮ ಭಜನಾ ಮಂದಿರ, ಪಳ್ಳದಕೋಡಿ-ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 12.45ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 6ಕ್ಕೆ ಸತ್ಯಗಣಪತಿ ಪೂಜೆ ಪ್ರಾರಂಭಗೊಳ್ಳಲಿದೆ. ರಾತ್ರಿ ಗಂಟೆ 8 ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.

ರಾತ್ರಿ ಗಂಟೆ 8.15ರಿಂದ ಸಾಂಸ್ಕೃತಿಕ ಕಾರ್ಯಕ್ರಮ ’ಕೋಟಿ-ಚೆನ್ನಯ’ ಧಾರಾವಾಹಿಯ ’ದೇಯಿ ಬೈದೆದಿ’ ಖ್ಯಾತಿಯ ಶೀತಲ್ ಶೆಟ್ಟಿ ಸಾರಥ್ಯದಲ್ಲಿ ’ಸಂಗೀತ ಕಲಾನಿಧಿ’ ಬಿರಿದಾಂಕಿತ ಪದ್ಮರಾಜ್ ಬಿ.ಸಿ ಚಾರ್ವಾಕ ಇವರ ಅತ್ಯಾಕರ್ಷಕ ನಿರೂಪಣೆ, ನಕ್ಷತ್ರ ನೃತ್ಯ ಕಲಾ ತಂಡ ಆಲಂಕಾರು, ಪುತ್ತೂರು ಇವರು ಪ್ರಸ್ತುತಪಡಿಸುವ ’ತುಳುನಾಡ ನಾಟ್ಯ-ಗಾನ-ವೈಭವ’ ನಡೆಯಲಿದೆ.

ದಿನಾಂಕ 20-09-2023ನೇ ಬುಧವಾರ ಬೆಳಿಗ್ಗೆ ಗಂಟೆ 8ಕ್ಕೆ ಬೆಳಗ್ಗಿನ ಪೂಜೆ, 9ಕ್ಕೆ ಭಜನಾ ಕಾರ್ಯಕ್ರಮ ನಡೆಯಲಿದೆ. 25ನೇ ವರ್ಷದ ಬೆಳ್ಳಿಹಬ್ಬದ ಪ್ರಯುಕ್ತ 24 ತೆಂಗಿನಕಾಯಿಗಳ ಗಣಪತಿ ಹೋಮ, ಮೋದಕ ಹವನ ನಡೆಯಲಿದೆ. ಮಧ್ಯಾಹ್ನ ಗಂಟೆ 12.45 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಅಪರಾಹ್ನ ಗಂಟೆ 2ರಿಂದ 3ರ ವರೆಗೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಗಂಟೆ 3ರಿಂದ 4.30ರ ವರೆಗೆ ಮಲರಾಯಿ ನೃತ್ಯ ಗ್ರೂಪ್ಸ್ ಮಿತ್ತನಡ್ಕ ಇವರಿಂದ ನೃತ್ಯ ನಡೆಯಲಿದೆ. ಸಿಂಗಾರಿ ಮೇಳ ಮಂಗಳೂರು ಇವರಿಂದ ಚೆಂಡೆ ವಾದನ ನಡೆಯಲಿದೆ.

ಸಂಜೆ 4.30ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಂದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವಗೆನಾಡು ಸುಬ್ರಾಯ ದೇವಸ್ಥಾನ ಮತ್ತು ಮಿತ್ತನಡ್ಕ ಮಲರಾಯ ದೈವಸ್ಥಾನದ ಆಡಳಿತ ಮುಕ್ತೇಸರ ಮುಗುಳಿ ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿಭಾಗ ಪ್ರಚಾರ ಪ್ರಮುಖ್, ರಾ.ಸೇ.ಸಂಘದ ಸುರಾಜ್ ಕುಮಾರ್‍ ಮಂಗಳೂರು, ಬಜಾಲು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾೖಕ್‌ ಉಳಿಪ್ಪಾಡಿ, ಸಾಮಾಜಿಕ ಕಾರ್ಯಕರ್ತ, ಭಾರತೀಯ ಭೂ ಸೇನೆ ಪೂರ್ವ ಅಧಿಕಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಹಿ.ಜಾ.ವೇದಿಕೆ, ಪ್ರಾಂತ ಕಾರ್‍ಯಕಾರಿಣಿ ಸದಸ್ಯ, ವಕೀಲ ಕಿಶೋರ್‍ ಕುಮಾರ್‍ ಭಾಗವಹಿಸಲಿದ್ದಾರೆ.

ದಿನಾಂಕ 19-9-2023ರಂದು ಅಪರಾಹ್ನ ಗಂಟೆ 2.30ರಿಂದ ಕನ್ಯಾನ, ಕರೋಪಾಡಿ ಗ್ರಾಮಕ್ಕೆ ಒಳಪಟ್ಟ ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ.

ಶೋಭಾಯಾತ್ರೆಯು ಮಿತ್ತನಡ್ಕ ಗಣೇಶನಗರದಿಂದ ಹೊರಟು ಶ್ರೀ ಮಲರಾಯಿ ದೈವಸ್ಥಾನ ಪಳ್ಳದಕೋಡಿ ಶ್ರೀರಾಮ ಭಜನಾ ಮಂದಿರದ ಮೂಲಕ ಪಳನೀರು ಶ್ರೀ ಕೋಮರಾಯ ದೈವಸ್ಥಾನದ ಕೋಮರಾಯನ ಕೆರೆಯಲ್ಲಿ ಶ್ರೀ ಗಣೇಶನ ವಿಗ್ರಹ ವಿಸರ್ಜನೆ ನಡೆಯಲಿದೆ.

- Advertisement -

Related news

error: Content is protected !!