Wednesday, April 24, 2024
spot_imgspot_img
spot_imgspot_img

263 ಕೋಟಿ ರೂ. ಅಕ್ರಮ ಹಣದ ವಹಿವಾಟು..! ಮಾಜಿ ತೆರಿಗೆ ಅಧಿಕಾರಿಗೆ ಇಡಿ ಗ್ರಿಲ್

- Advertisement -G L Acharya panikkar
- Advertisement -

ಮಾಜಿ ತೆರಿಗೆ ಇಲಾಖೆ ಅಧಿಕಾರಿ ಇದೀಗ 263 ಕೋಟಿ ರೂ. ಅಕ್ರಮ ಹಣದ ವಹಿವಾಟು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುವಂತಾಗಿದೆ. ರಿಯಾಲಿಟಿ ಶೋಗಳಾದ ರೋಡಿಸ್ ಮತ್ತು ಬಿಗ್ ಬಾಸ್-12ರ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದ ಕೀರ್ತಿ ವರ್ಮಾ ಈಗ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿದ್ದಾರೆ.

ಆದಾಯ ತೆರಿಗೆ ಇಲಾಖೆಗೆ ಭಾರೀ ಮೊತ್ತದ ತೆರಿಗೆ ವಂಚನೆ ಪ್ರಕರಣದ ಆರೋಪಿ ಜೊತೆ ಕೀರ್ತಿ ವರ್ಮಾ ಕೈ ಜೋಡಿಸಿದ್ದಾರೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಇಡಿ ತನಿಖೆಗೆ ಮುಂದಾಗಿದೆ. ಕಳೆದ ವರ್ಷ ಉದ್ಯಮಿ ತಾಜಾನಿ ಮಂಡಲ್ ಅಧಿಕಾರಿ ಮತ್ತು ಪನ್ವೆಲ್ ಭೂಷಣ್ ಆನಂತ್ ಪಾಟೀಲ್ ಮತ್ತು ಇತರರ ವಿರುದ್ಧ ತೆರಿಗೆ ವಂಚನೆ ಪ್ರಕರಣ ದಾಖಲಿಸಿಕೊಂಡಿತ್ತು. ಇವರಿಗೆ ಹಿರಿಯ ತೆರಿಗೆ ಅಧಿಕಾರಿಯಾಗಿದ್ದ ಕೀರ್ತಿ ವರ್ಮಾ ನೆರವು ನೀಡಿದ್ದರು ಎಂಬ ಆರೋಪ ಹಿನ್ನೆಲೆಯಲ್ಲಿ ಹಲವಾರು ಬಾರಿ ವಿಚಾರಣೆ ನಡೆಸಿದೆ.

2007-08ರಿಂದ 2008-09ರ ಅವಧಿಯಲ್ಲಿ ಕಂಪನಿಗೆ ನಕಲಿ ಬಿಲ್ ಹಾಗೂ ರೀಫಂಡ್ ಗಳ ಲೆಕ್ಕ ತೋರಿಸಿ 263.95 ಕೋಟಿ ರೂ. ವಂಚಿಸಲಾಗಿತ್ತು ಎಂದು ಹೇಳಲಾಗಿದೆ. ಕಳೆದ ವರ್ಷ ಜಾರಿ ನಿರ್ದೇಶನಾಲಯ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ65 ಕೋಟಿ ರೂ. ಮೌಲ್ಯದ ಚರಾಸ್ತಿಗಳನ್ನು ವಶಕ್ಕೆ ಪಡೆದಿತ್ತು. ಕೀರ್ತಿ ಹರಿಯಾಣದ ಗುರ್ ಗಾಂವ್ ನ ತಮ್ಮ ಮನೆಯನ್ನು ಮಾರಿದ್ದರು.

- Advertisement -

Related news

error: Content is protected !!