Sunday, May 5, 2024
spot_imgspot_img
spot_imgspot_img

ಸಾಲಗಾರರಿಗೆ ಕೇಂದ್ರದಿಂದ ಬಿಗ್‌ ರಿಲೀಫ್‌, 2 ಕೋಟಿ ರೂ.ವರೆಗಿನ ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ!

- Advertisement -G L Acharya panikkar
- Advertisement -

ನವದೆಹಲಿ: ಆರು ತಿಂಗಳ ಮೊರಾಟೋರಿಯಂ ಅವಧಿಯಲ್ಲಿ 2 ಕೋಟಿ ರೂಪಾಯಿವರೆಗಿನ ಸಾಲದ ಮೇಲಿನ ಚಕ್ರಬಡ್ಡಿಯನ್ನು (ಇಎಂಐ ಮುಂದೂಡಿಕೆ ಅವಧಿಯ ಮಾಸಿಕ ಕಂತು ಹಾಗೂ ಬಡ್ಡಿಯ ಮೇಲಿನ ಬಡ್ಡಿ) ಮನ್ನಾ ಮಾಡಲು ಸಿದ್ಧವಿದ್ದೇವೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಇದರಿಂದ ದೊಡ್ಡ ಸಂಖ್ಯೆಯ ಸಾಲಗಾರರು ಒಂದಿಷ್ಟು ನಿರಾಳರಾಗಿದ್ದಾರೆ.

ಎಂಎಸ್‌ಎಮ್‌ಇ ಸಾಲ, ಶಿಕ್ಷಣ ಸಾಲ, ವಾಹನ ಸಾಲ, ಸರಕುಗಳ ಮೇಲಿನ ಸಾಲ, ಗೃಹ ಸಾಲ ಮತ್ತು ಕ್ರೆಡಿಟ್‌ ಕಾರ್ಡ್‌ ಬಾಕಿ ಪಾವತಿಗೆ ಈ ಚಕ್ರಬಡ್ಡಿ ಮನ್ನಾ ಸೌಲಭ್ಯ ನೀಡಲಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ.


ಸಾಂಕ್ರಾಮಿಕ ರೋಗದ ಪರಿಸ್ಥಿತಿಯಲ್ಲಿ ಸರಕಾರ ಈ ಹೊರೆಯನ್ನು ಮಾತ್ರ ಹೊರಬಹುದು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಅಫಿಡವಿಟ್‌ ಸಲ್ಲಿಸಿದೆ. ಇದಕ್ಕೆ ಅನುದಾನ ಪಡೆದುಕೊಳ್ಳಲು ಸಂಸತ್‌ನ ಅನುಮೋದನೆ ಪಡೆದುಕೊಳ್ಳಲಾಗುತ್ತದೆ ಎಂದು ಇದರಲ್ಲಿ ಹೇಳಲಾಗಿದೆ.

- Advertisement -

Related news

error: Content is protected !!