Sunday, July 5, 2026
spot_imgspot_img
spot_imgspot_img

ಗೋಶಾಲೆ ದೇಣಿಗೆ ವಿವಾದ: ಶಶಿಧರ್ ಭಟ್‌ರನ್ನು ಟ್ರಸ್ಟ್‌ನಿಂದ ಕೈಬಿಟ್ಟ ಪೇಜಾವರ ಮಠ

- Advertisement -
- Advertisement -

ಉಡುಪಿ: ಪೇಜಾವರ ಮಠದ ಅಧೀನದಲ್ಲಿರುವ ನೀಲಾವರ ಗೋಶಾಲೆಗೆ ಸಂಬಂಧಿಸಿದ ಗೋವರ್ಧನಗಿರಿ ಟ್ರಸ್ಟ್‌ನ ಸದಸ್ಯನೋರ್ವ ಗೋ ಶಾಲೆಯ ಹೆಸರಿನಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಉಡುಪಿ ಭಾರತೀಶ ಜುವೆಲ್ಲರ್ಸ್‌ನ ಶಶಿಧರ ಭಟ್ ಎಂಬಾತ ‘ನೀಲಾವರ ಗೋಗ್ರಾಸ ಸೇವಾ ತಂಡ’ ಎಂಬ ತಂಡ ವನ್ನು ರಚಿಸಿದ್ದು, ಸಾರ್ವಜನಿಕ ದೇಣಿಗೆಗಳನ್ನೂ ಪಡೆದಿರುವ ಮಾಹಿತಿ ತಿಳಿದು ಬಂದಿದೆ. ಪೇಜಾವರ ಸ್ವಾಮೀಜಿ ಹಾಗೂ ಟ್ರಸ್ಟ್‌ನ ಗಮನಕ್ಕೆ ಬಾರದೆ ಅನಧಿಕೃತವಾಗಿ, ಸ್ವಾಮೀಜಿಯ ಫೋಟೋ ಹಾಗೂ ಮಠದ ಹೆಸರನ್ನು ಮನವಿಗಳಲ್ಲಿ ಬಳಸಿ ದೇಣಿಗೆ ಸಂಗ್ರಹ ನಡೆಸಿದ್ದಾನೆ ಎಂದು ತಿಳಿದುಬಂದಿದೆ.ಆದುದರಿಂದ ಶಶಿಧ‌ರ್ ಭಟ್ ನನ್ನು ತಕ್ಷಣದಿಂದ ನೀಲಾವರ ಗೋಶಾಲೆಯ ಟ್ರಸ್ಟ್‌ನಿಂದ ವಜಾ ಮಾಡಲಾಗಿದೆ. ಗೋಶಾಲೆಗೂ ಅವರ ತಂಡಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಸಾರ್ವಜನಿಕರು ಮೋಸ ಹೋಗಬಾರದು.

ಗೋಶಾಲೆಗೆ ದೇಣಿಗೆ ನೀಡುವವರು ಟ್ರಸ್ಟ್‌ನ ಅಧಿಕೃತ ರಶೀದಿಯನ್ನು ಕಡ್ಡಾಯವಾಗಿ ಪಡೆಯಬೇಕೆಂದು ಪೇಜಾವರ ಅಧೋಕ್ಷಜ ಮಠದ ಗೋವರ್ಧನಗಿರಿ ಟ್ರಸ್ಟ್‌ನ ವಿಶ್ವಸ್ಥ ಲಕ್ಷ್ಮೀನಾರಾಯಣ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!