Sunday, July 5, 2026
spot_imgspot_img
spot_imgspot_img

ಪುತ್ತೂರು: ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತಾ ನಿವಾಸಕ್ಕೆ ಮಾಜಿ ಅಡ್ವಕೇಟ್ ಜನರಲ್ ಅರುಣ್ ಶ್ಯಾಮ್ ಭೇಟಿ

- Advertisement -
- Advertisement -

ಪುತ್ತೂರು: ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತಾ ಅವರ ನಿವಾಸಕ್ಕೆ ಖ್ಯಾತ ನ್ಯಾಯವಾದಿ, ಹೈಕೋರ್ಟ್ ಮಾಜಿ ಅಡ್ವಕೇಟ್ ಜನರಲ್ ಅರುಣ್ ಶ್ಯಾಮ್ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಪುತ್ತೂರಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಹತ್ವದ ಚರ್ಚೆ ನಡೆದಿದೆ ಮತ್ತು ಪುತ್ತೂರು ಬಿಜೆಪಿಯಲ್ಲಿನ ಬೆಳವಣಿಗೆಯ ವಿಚಾರಕ್ಕೆ ಸಂಬಂಧಿಸಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಅರುಣ್ ಶ್ಯಾಮ್ ರವರು ಹೈಕೋರ್ಟ್ ನ ಖ್ಯಾತ ವಕೀಲರಾಗಿದ್ದು, ಅನೇಕ ಹಿಂದೂ ಕಾರ್ಯಕರ್ತರ ಪರ ವಾದ ಮಂಡಿಸಿದ್ದರು. ಈ ಹಿಂದೆ ಪುತ್ತೂರಿನ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಇವರ ಹೆಸರು ಹರಿದಾಡುತ್ತಿದ್ದು, ಇತ್ತೀಚೆಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು.

ಪ್ರಸನ್ನ ಮಾರ್ತಾ ಅವರು ಆರಂಭದಲ್ಲಿ ಪುತ್ತಿಲ ಪರಿವಾರದೊಂದಿಗೆ ಗುರುತಿಸಿಕೊಂಡಿದ್ದು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಪುತ್ತಿಲ ಪರಿವಾರದ ಕಾರ್ಯಕ್ರಮವೊಂದರಲ್ಲಿ ಅವಮಾನವೆಸಗಿದ ಕಾರಣ ಅವರು ಪುತ್ತಿಲ ಪರಿವಾರವನ್ನು ತೊಲಗಿದ್ದರು.

ಇದೀಗ ಅರುಣ್ ಶ್ಯಾಮ್ ಅವರು ಪ್ರಸನ್ನ ಮಾರ್ತಾ ಅವರ ನಿವಾಸಕ್ಕೆ ಭೇಟಿ ನೀಡಿರುವುದು ಪುತ್ತೂರಿನ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

- Advertisement -

Related news

error: Content is protected !!