Wednesday, June 17, 2026
spot_imgspot_img
spot_imgspot_img

ಪಾಕಿಸ್ತಾನ ಪೊಲೀಸರ ಗುಂಡೇಟಿಗೆ ಆಸ್ಟ್ರೇಲಿಯಾದ 9 ವರ್ಷದ ಬಾಲಕಿ ಮೃತ್ಯು; ಅಧಿಕಾರಿಗಳ ಅಮಾನತು -ತನಿಖೆಗೆ ಆಗ್ರಹ

- Advertisement -
- Advertisement -

ಇಸ್ಲಮಾಬಾದ್: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಸಶಸ್ತ್ರ ದರೋಡೆಕೋರರ ಕಾರು ಎಂದು ತಪ್ಪಾಗಿ ಭಾವಿಸಿ ಪೊಲೀಸರು ವಾಹನದ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಒಂಬತ್ತು ವರ್ಷದ ಆಸ್ಟ್ರೇಲಿಯಾದ ಬಾಲಕಿ ಮೃತಪಟ್ಟಿದ್ದು, ಆಕೆಯ ಕುಟುಂಬದ ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಪರ್ತ್‌ನ ನಿವಾಸಿಯಾಗಿದ್ದ ಹನಿಯಾ ಅಹ್ಮದ್ ಅವರ ಕುಟುಂಬ ಜೂನ್ 10 ರ ತಡರಾತ್ರಿ ಪಂಜಾಬ್ ಪ್ರಾಂತದ ಚಕ್ವಾಲ್‌ನಲ್ಲಿರುವ ಸಂಬಂಧಿಕರನ್ನು ಭೇಟಿ ಮಾಡಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಕುಟುಂಬವು ಬಾಡಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದರೋಡೆಕೋರರು ಅವರನ್ನು ಅಡ್ಡಗಟ್ಟಿದ್ದಾರೆ.ಈ ಸಂದರ್ಭದಲ್ಲಿ ಭದ್ರತಾ ಅಧಿಕಾರಿಗಳು ಮಧ್ಯಪ್ರವೇಶಿಸಿದಾಗ ಶಂಕಿತ ಆರೋಪಿಗಳು ಪೊಲೀಸರತ್ತ ಗುಂಡು ಹಾರಿಸಿ ತಮ್ಮ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ಅದೇ ಸಮಯದಲ್ಲಿ ಆಸ್ಟ್ರೇಲಿಯಾ ಮೂಲದ ಕುಟುಂಬದವರಿದ್ದ ವಾಹನವೂ ಸ್ಥಳದಿಂದ ಹೊರಟಿದೆ.ಕಾರು ತಕ್ಷಣವೇ ಚಲಿಸುವುದನ್ನು ಕಂಡ ಅಧಿಕಾರಿಯೊಬ್ಬರು ದರೋಡೆಕೋರರು ಸಂತ್ರಸ್ತರ ವಾಹನದಲ್ಲೇ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಭಾವಿಸಿ ಕಾರಿನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಕರ್ತವ್ಯದಲ್ಲಿದ್ದ ಅಧಿಕಾರಿಯ ತಪ್ಪು ನಿರ್ಧಾರವು ಹನಿಯಾ ಅವರ ದುರಂತ ಸಾವಿಗೆ ಮತ್ತು ಆಕೆಯ ತಂದೆ ಹಾಗೂ ಸಹೋದರನಿಗೆ ಗಾಯಗಳಾಗಲು ಕಾರಣವಾಯಿತು.

ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಿ ಅಧಿಕೃತವಾಗಿ ಬಂಧಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ಡಾನ್’ ಪತ್ರಿಕೆ ವರದಿ ಮಾಡಿದೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಟನೀಸ್ ಈ ಘಟನೆಯ ಬಗ್ಗೆ ಪಾರದರ್ಶಕ ತನಿಖೆಗೆ ಆಗ್ರಹಿಸಿದ್ದಾರೆ

- Advertisement -

Related news

error: Content is protected !!