- Advertisement -
- Advertisement -

ಬೆಳ್ತಂಗಡಿ: ಪಶ್ಚಿಮ ವಲಯ ಡಿಸಿಆರ್‌ಇ ಪೊಲೀಸ್ ಅಧೀಕ್ಷಕರಾದ ಸೈಮನ್ ಸಿ.ಎ. ಅವರು ಪ್ರಯಾಣಿಸುತ್ತಿದ್ದ ಸರ್ಕಾರಿ ಇನೋವಾ ಕಾರು ಚಾರ್ಮಾಡಿ ಗ್ರಾಮದ ಅಂಬಿಕಾನಗರ ಬಳಿ ಮಂಗಳವಾರ ಮಧ್ಯಾಹ್ನ ಅಪಘಾತಕ್ಕೀಡಾಗಿದೆ.
ಸೈಮನ್ ಸಿ.ಎ. ಅವರೊಂದಿಗೆ ಪಿಐ ಕುಸುಮಾಧರ, ಸಿಬ್ಬಂದಿ ಮಂಜುನಾಥ್ ಹಾಗೂ ಚಾಲಕ ಬೈರೆ ಗೌಡ ಅವರು ಚಿಕ್ಕಮಗಳೂರಿಗೆ ತೆರಳುತ್ತಿದ್ದ ವೇಳೆ, KA-01-G-6463 ಸಂಖ್ಯೆಯ ಸರ್ಕಾರಿ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿಬಿದ್ದಿದೆ.ಅಪಘಾತದಲ್ಲಿ ವಾಹನಕ್ಕೆ ಹಾನಿಯಾಗಿದ್ದು, ಕಾರಿನಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಈ ಕುರಿತು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 55/2026, ಕಲಂ 281 ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Advertisement -








