Thursday, July 23, 2026
spot_imgspot_img
spot_imgspot_img

ತುಳು ರಂಗಭೂಮಿಯ ಹಿರಿಯ ಕಲಾವಿದ ಸುಜಿತ್ ಶೆಟ್ಟಿ ಪಾದೂರು ನಿಧನ

- Advertisement -
- Advertisement -

ಉಡುಪಿ : ತುಳು ರಂಗಭೂಮಿ ಕಲಾವಿದ, ಕಾಪು ರಂಗ ತರಂಗ ನಾಟಕ ತಂಡದ ಸ್ಥಾಪಕ ಸದಸ್ಯ, ಮಾಜಿ ಸಂಚಾಲಕ ಸುಜಿತ್ ಶೆಟ್ಟಿ ಪಾದೂರು(54) ಶುಕ್ರವಾರ ನಿಧನರಾದರು.

ಸಿದ್ಧ ರಂಗ ಕಲಾವಿದರಾಗಿದ್ದ ಅವರು ಹಾಸ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಪಾತ್ರಗಳನ್ನು ಅತ್ಯಂತ ಯಶಸ್ಸಿಯಾಗಿ ನಿಭಾಯಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಕೆ. ಲೀಲಾಧರ ಶೆಟ್ಟಿ ಅವರ ಸಾರಥ್ಯದ ಕಾಪು ರಂಗ ತರಂಗ ಕಲಾವಿದರು ತಂಡದ ಸ್ಥಾಪಕ ಸದಸ್ಯರಾಗಿ , ತಂಡದ ಸಮಗ್ರ ನಿರ್ವಹಣೆಯ ಜವಾಬ್ದಾರಿಯನ್ನು ಅತ್ಯಂತ ಯಶಸ್ಸಿಯಾಗಿ ನಿಭಾಯಿಸಿದ್ದರು.

ಅಸೌಖ್ಯದಿಂದ ಬಳಲುತ್ತಿದ್ದ ಸುಜಿತ್ ಶೆಟ್ಟಿ ಕೆಲವು ಸಮಯಗಳಿಂದ ನಟನೆಯಿಂದ ದೂರ ಉಳಿದಿದ್ದರು ಎಂದು ತಿಳಿದುಬಂದಿದೆ. ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

- Advertisement -

Related news

error: Content is protected !!