Tuesday, May 14, 2024
spot_imgspot_img
spot_imgspot_img

ಉಡುಪಿ: ರೋಟರಿ ಸಮುದಾಯ ದಳ, ಕೆಮ್ಮಣ್ಣು ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.) ಕೆಮ್ಮಣ್ಣು ಇವರ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 35ನೇ ವರ್ಷದ ಮೊಸರು ಕುಡಿಕೆ

- Advertisement -G L Acharya panikkar
- Advertisement -

ಉಡುಪಿ: ರೋಟರಿ ಸಮುದಾಯ ದಳ, ಕೆಮ್ಮಣ್ಣು ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.) ಕೆಮ್ಮಣ್ಣು ಇವರ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 35ನೇ ವರ್ಷದ ಮೊಸರು ಕುಡಿಕೆ ಆಚರಣೆ ಸಾರ್ವಜನಿಕ ಕಾರ್ಯಕ್ರಮವು ಸೆ.10 ರಂದು ಮಧ್ಯಾಹ್ನ ಗಂಟೆ 2ರಿಂದ ಸಂಜೆ 6ರ ವರೆಗೆ ಕೆಮ್ಮಣ್ಣು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಸಂಜೆ 5.30 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರೊ|ಶೈಲೇಂದ್ರ ರಾವ್ Assistant Governor, Zone-5 R.I. Dist.3182, ರೊ| ಕುಮಾರಸ್ವಾಮಿ RCC Dist.Chairman, ರೊ| ಕೃಷ್ಣ ಪ್ರಸಾದ್ ಅಧ್ಯಕ್ಷರು, ರೋಟರಿ ಕ್ಲಬ್ ನಿಟ್ಟೆ, ವೆಂಕಟಕೃಷ್ಣ ಕೆಮ್ಮಣ್ಣು ನಿಕಟಪೂರ್ವ RCC ಜಿಲ್ಲಾ ಪ್ರತಿನಿಧಿ ಮತ್ತು ನಿರ್ದೇಶಕರು, ನಿಟ್ಟೆ ರೈತ ಉತ್ಪಾದಕಾ ಸಂಸ್ಥೆ, ನಿತಿನ್ ಸಾಲಿಯಾನ್ ಉಪಾಧ್ಯಕ್ಷರು, ಗ್ರಾ.ಪಂ.ನಿಟ್ಟೆ ಭಾಗವಹಿಸಲಿದ್ದಾರೆ.

ಕೆಮ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರು, ಜ್ಯೋತಿಷ್ಯರು ವೇದಮೂರ್ತಿ ಪ್ರಸನ್ನ ಆಚಾರ್ಯ ಎಂ.ಎ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರೊ| ಶಶಿಕಾಂತ ಕರಿಂಕ, ನಿಕಟಪೂರ್ವ, Assistant Governor, ವಿಷ್ಣುಮೂರ್ತಿ ರಾವ್ ನಿವೃತ್ತ ಶಿಕ್ಷಕರು, ಕೆಮ್ಮಣ್ಣು , ವಾಸು ಆಚಾರ್ಯ ತೆಂಕುಮನೆ, ಕೃಷಿ ಮತ್ತು ಹೈನುಗಾರಿಕೆ ಇವರನ್ನು ಸನ್ಮಾನಿಸಲಿದ್ದಾರೆ. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ 90%ಕ್ಕಿಂತ ಅಧಿಕ ಅಂಕ ಗಳಿಸಿದ ಕೆಮ್ಮಣ್ಣಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದೆ.

- Advertisement -

Related news

error: Content is protected !!