ವಿಟ್ಲ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ, ವಿಟ್ಲ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆಯು ವಿಟ್ಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪುತ್ತೂರು ರಾಮಕೃಷ್ಣ ವಿದ್ಯಾ ಸಂಸ್ಥೆಯ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಉದ್ಘಾಟಿಸಿದರು. ಸ್ಥಳೀಯ ಸಂಸ್ಥೆ ವಿಟ್ಲದ ಅಧ್ಯಕ್ಷ ಸುದರ್ಶನ ಪಡಿಯಾರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗೌರವಾಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ, ವಿಟ್ಠಲ ಎಜುಕೇಶನ್ ಸೊಸೈಟಿ ಸದಸ್ಯ ನಿತ್ಯಾನಂದ ನಾಯಕ್, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಆದೇಶಗಳ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಬಂಟ್ವಾಳ ದೈಹಿಕ ಪರಿವೀಕ್ಷಕ ಆಶಾ ನಾಯಕ್, ಸ್ಕೌಟ್-ಗೈಡ್ ವಯಸ್ಕ ಸಂಪನ್ಮೂಲ ಆಯುಕ್ತ ಎಂ.ಜೆ. ಕಜೆ, ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಕುಮಾರ್, ತರಬೇತಿ ಆಯುಕ್ತ ಶಾಂತಾರಾಮ್ ಪ್ರಭು ಹಾಗೂ ಸಂಘಟನಾ ಆಯುಕ್ತ ಭರತ್ ರಾಜ್ ಉಪಸ್ಥಿತರಿದ್ದರು.
ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರತೀಪ್ ಎ.ಆರ್. ಸ್ವಾಗತಿಸಿದರು. ಜಿಲ್ಲಾ ಪ್ರತಿನಿಧಿ ನಾರಾಯಣ ನಾಯಕ್ ವಾರ್ಷಿಕ ವರದಿ ಮಂಡಿಸಿದರು. ಜತೆ ಕಾರ್ಯದರ್ಶಿ ಜಯಶ್ರೀ ವಂದಿಸಿದರು. ಕೋಶಾಧಿಕಾರಿ ವಿಶ್ವನಾಥ ಗೌಡ ಕುಳಾಲು ಕಾರ್ಯಕ್ರಮ ನಿರೂಪಿಸಿದರು.
ವಿಟ್ಲ ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಲೀಡರ್‌ಗಳಾದ ಜಲಜಾಕ್ಷಿ ಹಾಗೂ ಶ್ರೀನಿವಾಸ, ಜತೆ ಕಾರ್ಯದರ್ಶಿಗಳಾದ ವೀಣಾ ದೇವಿ ಮತ್ತು ಇಸ್ಮಾಯಿಲ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.








