Monday, November 2, 2026
spot_imgspot_img
spot_imgspot_img

ಉಪ್ಪಿನಂಗಡಿ: EMI ವಸೂಲಿಗೆ ತೆರಳಿದ ಫೈನಾನ್ಸ್ ಸಿಬ್ಬಂದಿಗೆ ಹಲ್ಲೆ: ಶಮೀರ್ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಉಪ್ಪಿನಂಗಡಿ: ಬಾಕಿ ಉಳಿದಿದ್ದ ಮೊಬೈಲ್ ಇಎಂಐ ಹಣ ಪಾವತಿಸುವುದಾಗಿ ಮನೆಗೆ ಕರೆಸಿಕೊಂಡು ಬಜಾಜ್ ಫೈನಾನ್ಸ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ನಡೆದಿದೆ.

ಈ ಸಂಬಂಧ ಬೆದ್ರೋಡಿಯ ಶಮೀರ್ ಎಂಬಾತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಜತ್ತೂರು ಗ್ರಾಮದ ಬೆದ್ರೋಡಿಯ ಹನ್ನತ್ ಬೀಬಿ ಅವರು ಬಜಾಜ್ ಫೈನಾನ್ಸ್ ಮೂಲಕ ಮೊಬೈಲ್ ಖರೀದಿಸಿದ್ದು, ಅದರ ಇಎಂಐ ಪಾವತಿಯಲ್ಲಿ ಬಾಕಿ ಉಳಿಸಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಜಾಜ್ ಫೈನಾನ್ಸ್ ಸಿಬ್ಬಂದಿಯೊಬ್ಬರು ಹನ್ನತ್ ಬೀಬಿ ಅವರನ್ನು ಸಂಪರ್ಕಿಸಿದಾಗ, ಮನೆಗೆ ಬಂದರೆ ಬಾಕಿ ಹಣ ಪಾವತಿಸುವುದಾಗಿ ತಿಳಿಸಿದ್ದಾರೆ. ಅದರಂತೆ ಸಿಬ್ಬಂದಿ ಅವರ ಮನೆಗೆ ತೆರಳಿದ್ದರು.ಈ ವೇಳೆ ಹನ್ನತ್ ಬೀಬಿ ಅವರ ಸಹೋದರ ಶಮೀರ್ ಏಕಾಏಕಿ ಸಿಬ್ಬಂದಿಯ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆನ್ನೆಗೆ ಹೊಡೆದಿದ್ದಾನೆ ಎನ್ನಲಾಗಿದೆ.

ಬಳಿಕ ಪಕ್ಕದಲ್ಲಿದ್ದ ಕುರ್ಚಿಯಿಂದ ಕೈಗೆ ಹೊಡೆದು, ಅಲ್ಲಿದ್ದ ಕಾರಿನ ಟಯರ್ ಎಸೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಸಿಬ್ಬಂದಿಯ ಬಲಕಾಲು, ಕೈ ಹಾಗೂ ಕೆನ್ನೆಗೆ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ.ಘಟನೆ ವೇಳೆ ಹನ್ನತ್ ಬೀಬಿ ಅವರ ಮನೆಯವರು ಮಧ್ಯಪ್ರವೇಶಿಸಿ ಗಲಾಟೆಯನ್ನು ಬಿಡಿಸಿದ್ದು, ಗಾಯಗೊಂಡ ಸಿಬ್ಬಂದಿಯನ್ನು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 145/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!