Friday, May 20, 2022
spot_imgspot_img
spot_imgspot_img

41 ದಿನ ವೃತ ಮಾಡಿ ಅಯ್ಯಪ್ಪ ದರ್ಶನ ಪಡೆದ ನಟ ಅಜಯ್ ದೇವಗನ್

- Advertisement -
- Advertisement -

ಬಾಲಿವುಡ್ ನ ಖ್ಯಾತ ನಟ ಅಜಯ್ ದೇವಗನ್ ಇತ್ತೀಚೆಗೆ ಕಪ್ಪು ಬಟ್ಟೆಯಲ್ಲಿರುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಅಭಿಮಾನಿಗಳು ಹೊಸ ಸಿನೆಮಾ ಲುಕ್ ಎಂದು ಕೊಂಡಿದ್ದರು. ಆದರೆ ಇದೀಗ ಅಜಯ್ ದೇವಗನ್ 41 ದಿನಗಳ ವೃತ ಮಾಡಿ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆದು ಬಂದಿದ್ದಾರೆ.

ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯಲು ಅನುಸರಿಸಬೇಕಾದ ಎಲ್ಲವನ್ನೂ ನಟ ಅಜಯ್​ ದೇವಗನ್ ದೃಢವಾಗಿ ಪಾಲಿಸುತ್ತಿದ್ದರು ಎನ್ನಲಾಗಿದೆ. ಮಾಲಾಧಾರಿಯಾದ ಬಳಿಕವೂ ಕಟ್ಟುನಿಟ್ಟಾಗಿ ವಿಧಿ ವಿಧಾನಗಳನ್ನು ಅಜಯ್​ ದೇವಗನ್​ ಪಾಲಿಸಿದ್ದರಂತೆ. ನಟನ ಜೊತೆಯಲ್ಲಿ ಅವರ ಸೋದರ ಸಂಬಂಧಿಗಳಾದ ವಿಕ್ರಾಂತ್ ಮತ್ತು ಧರ್ಮೇಂದ್ರ ಅವರು ಅಜಯ್ ಅವರಂತೆಯೇ ಅದೇ ಆಚರಣೆಗಳನ್ನು ಅನುಸರಿಸಿದ್ದರು. ಅಜಯ್​ ದೇವಗನ್​ ಈಗ ಅಯ್ಯಪ್ಪ ದರ್ಶನ ಮುಗಿಸಿ ಮನೆಗೆ ಮರಳಿದ್ದಾರೆ.

vtv vitla
suvarna gold
- Advertisement -

Related news

error: Content is protected !!